

ವಿಟ್ಲ: 9ನೇ ಅಂತರಾಷ್ಟ್ರೀಯ ಓಕಿರವನ್ ಗೊಜು-ರಿಯ-ಡೊ ಫೆಡರೇಶನ್ ಬ್ಯಾಡ್ಮಿಂಟನ್ 3600, ಟೆಲುಕು ಇಂಟನ್, ಪೆರಕ್ ಇಲ್ಲಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಸಾಧನೆಗೈದಿದ್ದಾರೆ. ಕರಾಟೆ ಶಿಕ್ಷಕ ಮಾಧವ ಅಳಿಕೆ ಅವರಿಂದ ತರಬೇತಿ ಪಡೆಯುತ್ತಿರುವ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸಂಜಯ್ ಕುಮಾರ್ ಮತ್ತು ನಿವೇದಿತಾ, ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ರಂಜಿತ್ ಜಿ ಆರ್, ತೇಜಸ್ ಮತ್ತು ನಿಧಿ ಎಂ.ಎಸ್, ಪುತ್ತೂರು ಸುದಾನ ಶಾಲೆಯ ಅನುಷ್ಕಾ ಆರ್ ರಾವ್ ಹಾಗೂ ಕೇಪು ಸರಕಾರಿ ಪ್ರೌಢ ಶಾಲೆಯ ಪವನ್ ಕುಮಾರ್ ಇವರು ವೈಯಕ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.
ಕರಾಟೆ ಮುಖ್ಯ ಶಿಕ್ಷಕರೊಂದಿಗೆ ಸಹ ಶಿಕ್ಷಕರಾದ ದಿಲೀಪ್, ರೋಹಿತ್ ಎಸ್.ಎನ್, ಪ್ರತೀಕ್ ಆರ್.ಶೆಟ್ಟಿ ಹಾಗೂ ಸುಶಿತ್ ಪಿ.ಯು ಸಹ ತರಬೇತಿ ನೀಡಿದ್ದರು.








