

ವಿಟ್ಲ: ವಿಟ್ಲ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಇಲ್ಲಿನ ಶಿವಗಿರಿ ಪೊನ್ನೋಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಜಗದೀಶ ಪಾಣೆಮಜಲು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬಾಗವಹಿಸಿದ ವೀರಕಂಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಮಾತನಾಡಿನಾರಾಯಣಗುರುಗಳ ಜೀವನ ಜಗತ್ತಿನ ಸರ್ವ ಮನುಕುಲಕ್ಕೆ ಆದರ್ಶವಾಗಿದೆ. ಅವರು ನೈಜ ವಿಶ್ವಮಾನವತಾವಾದವನ್ನು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬಿಲ್ಲವ ಸಂಘದ ಪದಾಧಿಕಾರಿಗಳಾದ ಜಯಂತ ಪೂರ್ಲಪ್ಪಾಡಿ, ಸಂಜೀವ ಪೂಜಾರಿ ನಿಡ್ಯ, ಸಂಜೀವ ಎಂ.ಎಸ್., ಚಂದ್ರಹಾಸ ಸುವರ್ಣ, ರಮೇಶ್ ಆರ್.ಎಸ್, ಜಯಪ್ರಕಾಶ್ ಪಾಣೆಮಜಲು, ಗಿರಿಯಪ್ಪ ಪೂಜಾರಿ, ರವಿಚಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಲತಾ ಸೋಮಶೇಖರ್, ಗೌರವಾಧ್ಯಕ್ಷೆ ಪುಷ್ಪಾ ಸುಂದರ ಪೂಜಾರಿ, ಸುಜಾತ ಸಂಜೀವ ಪೂಜಾರಿ, ವನಿತಾ ಚಂದ್ರಹಾಸ ಸುವರ್ಣ, ಸುಮತಿ, ಸರಿತಾ ಇನ್ನಿತರರು ಇದ್ದರು.








