

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರುಗಳ 165 ನೇ ಜನ್ಮದಿನಾಚರಣೆಯ ಅಂಗವಾಗಿ ಗುರು ಜಯಂತಿ ಕಾರ್ಯಕ್ರಮವನ್ನು ಕೋಟಿ-ಚೆನ್ನಯ ಬಿಲ್ಲವ ಸಂಘ ಹಾಗೂ ದೇಯಿ ಬೈದೆದಿ ಮಹಿಳಾ ಸಂಘ ಕಜೆಕಾರು ಇದರ ವತಿಯಿಂದ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಬಡಗಕಜೆಕಾರು ಶಾಲೆ , ಪಾಂಡವರ ಕಲ್ಲು ಶಾಲೆ, ಹಾಗೂ ಕರ್ಲ ಶಾಲೆಗಳಿಗೆ ಶ್ರೀ ನಾರಾಯಣ ಗುರುಗಳ ಫೋಟೋವನ್ನು ನೀಡಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡುವುದರ ಮುಖಾಂತರ ಆಚರಿಸಲಾಯಿತು. ಅಲ್ಲದೆ ಗ್ರಾಮದ ಇತರ 9 ಅಂಗನವಾಡಿ ಕೇಂದ್ರಗಳಿಗೆ ಲಾಡು ವಿತರಿಸಲಾಯಿತು.
“ಜಗತ್ತಿಗೆ ಒಂದೇ ಜಾತಿ ಒಂದೇ ಮತ ಒಂದೇ ದೇವರು”ಎಂಬ ತತ್ವ ಹಾಗೂ ”ಶಿಕ್ಷಣದಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ” ಎಂಬ ಸಂದೇಶವನ್ನು ಮತ್ತು ನಾರಾಯಣ ಗುರುಗಳ ಆದರ್ಶ ತತ್ವವನ್ನು ಶಾಲಾ ಮಕ್ಕಳಿಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟಿ-ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷರು ಗೋಪಾಲ ಪೂಜಾರಿ ಕನೆಜಾಲು ದೇಯಿ ಬೈದೆದಿ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ವಿಠಲ ಪಾರೋಟ್ಟು ಹಾಗೂ ಕಜೆಕಾರು ಸಿಎ ಬ್ಯಾಂಕಿನ ಅಧ್ಯಕ್ಷರು ಮೋನಪ್ಪ ಪೂಜಾರಿ ಕಂಡೆತ್ಯಾರು,
ನಿವೃತ್ತ ಶಿಕ್ಷಕರಾದ ವಿಶ್ವನಾಥ ಸಾಲಿಯಾನ್ ನಾಡೇಲು, ದೇಯಿ ಬೈದೆದಿ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ಕೋಕಿಲ ಪಾಂಡವರ ಕಲ್ಲು , ಹಾಗೂ ವಿಶಾಲಾಕ್ಷಿ ಪಿತ್ತಿಲು, ಪ್ರವೀಣ್ ಪೂಜಾರಿ ಮಾಡ., ತಾರಾನಾಥ್ ಪೆರಂಪಾಡಿ ಗುತ್ತು., ಚಂದ್ರಹಾಸ ಪಾರೋಟ್ಟು,
ಹಾಗೂ ಆಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಲ್ಲವ ಸಮಾಜದ ಹಿರಿಯರು ಉಪಸ್ಥಿತರಿದ್ದರು.








