ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸಪ್ಟೆಂಬರ್ 15 ಭಾನುವಾರದಂದು ಒಂದು ದಿನದ ನವದಂಪತಿಗಳ ಸಮಾವೇಶ ಕಾರ್‍ಯಕ್ರಮ ನಡೆಯಲಿದೆ. ಒಂದು ವರ್ಷದ ಇತ್ತೀಚಿಗೆ ವಿವಾಹಿತರಾದ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಭಾರತೀಯ ಕುಟುಂಬ ಜೀವನ ಪದ್ಧತಿಯನ್ನು ಪ್ರತೀ ಮನೆಗಳಲ್ಲಿಯೂ ಆಚರಿಸುಂತಾಗಬೇಕು. ಕುಟುಂಬ ಸಮಾಜದ ಕೇಂದ್ರಬಿಂದು. ಹಾಗೂ ದೇಶದ ಕೇಂದ್ರಬಿಂದುವೂ ಆಗಿದೆ. ದೇಶದ ಮೇಲೆ ಅನೇಕ ರೀತಿಯ ಆಕ್ರಮಣಗಳು ಪರಕೀಯರಿಂದ ಆದಾಗಲೂ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿರುವುದು ಭಾರತೀಯ ಕುಟುಂಬ ಪದ್ಧತಿಯೇ ಆಗಿದೆ.
ಆದರೆ ಇತ್ತೀಚಿನ ದಶಕಗಳಲ್ಲಿ ಪಾಶ್ಚಿಮಾತ್ಯ ಅನುಕರಣೆ ಹೆಚ್ಚಾಗುತ್ತಿದ್ದು ನಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿರುತ್ತದೆ. ಕುಟುಂಬದ ಮೂಲಾಧರಾರವಾಗಿರುವ ಗೃಹಸ್ಥಾಶ್ರಮ ಧರ್ಮವನ್ನು ನೂತನ ದಂಪತಿಗಳಿಗೆ ತಿಳಿಸಿಕೊಡುವ ಕಾರ್‍ಯಕ್ರಮವೇ ನವದಂಪತಿಗಳ ಸಮಾವೇಶವಾಗಿದೆ. ಕೌಟುಂಬಿಕ ಶೈಲಿಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೂತನ ದಂಪತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ದಂಪತಿಗಳು 8.30 ಗಂಟೆಗೆ ಶ್ರೀರಾಮ ವಿದ್ಯಾಕೇಂದ್ರದ ಶಿಶುಮಂದಿರಕ್ಕೆ ಆಗಮಿಸುವಂತೆ ಸ್ವಾಗತ ಸಮಿತಿ ವಿನಂತಿಸುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here