ಬಂಟ್ವಾಳ: ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ ಬಂಟ್ವಾಳ ನಂ.1.ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳ ಮೆಸ್ಕಾಂ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಳಿಕ ಮಾತನಾಡಿದ ಅವರು ಬಹಳಷ್ಟು ದೂರುಗಳಿರುವುದು ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಲಿಲ್ಲ ಎಂಬುದು.
ಹಾಗಾಗಿ ಹಳತು ವಯರ್ ಗಳನ್ನು ಬದಲಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
217 ಕಿ.ಮೀ.ರಾಪಿಡ್ ಎಸಿ.ಎಸ್.ಆರ್. ತಂತಿ ಬದಲಾವಣೆ ಗೆ ಸರಕಾರದಿಂದ ಮಂಜೂರಾತಿ ಸಿಕ್ಕಿದ್ದು, ಟೆಂಡರ್ ಅಂತಿಮ ಹಂತದಲ್ಲಿ ದೆ, ಶೀಘ್ರದಲ್ಲೇ ಅನುಷ್ಠಾನ ವಾಗಲಿದೆ, ಇದರಿಂದ ಬಹುತೇಕ ಎಲ್ಲಾ ಸಮಸ್ಯೆ ಗಳು ಮುಗಿಯಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಮಂಗಳವಾರ ಇಡೀ ದಿನ ವಿದ್ಯುತ್ ವ್ಯತ್ಯಯ ಮಾಡಬೇಡಿ ಯಾವ ಪ್ರದೇಶದಲ್ಲಿ ಕೆಲಸ ಗಳು ನಡೆಯುತ್ತದೆ ಅಲ್ಲಿ ಮಾತ್ರ ವಿದ್ಯುತ್ ವ್ಯತ್ಯಯ ಮಾಡುವಂತೆ ತಿಳಿಸಿದರು.

ಬಂಟ್ವಾಳ ಪೇಟೆಯಲ್ಲಿ ನಿತ್ಯ ವಿದ್ಯುತ್ ವ್ಯತ್ಯಯವಾಗುವುದರಿಂದ ಕುಡಿಯುವ ನೀರಿನ ಸರಬರಾಜು ಮೇಲೆ ಪರಿಣಾಮ ಬೀರುತ್ತದೆ ಎಂದು ಪುರಸಭಾ ಸದಸ್ಯ ಗೋವಿಂದ ಪ್ರಭು ಅಧಿಕಾರಿಗಳ ಗಮನಕ್ಕೆ ತಿಳಿಸಿದರು.

ಬಂಟ್ವಾಳ ಮತ್ತು ಬಿಸಿರೋಡಿನಲ್ಲಿ ವಿದ್ಯುತ್ ವ್ಯತ್ಯಯ ತಪ್ಪಿಸಲು ಜಿವೈಸ್ ವಿದ್ಯುತ್ ತಂತಿಗಳನ್ನು ಹಾಕಲು ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಿದ್ದೇನೆ ಎಂದು ಮೆಸ್ಕಾಂ ಅಧಿಕಾರಿ ಮಂಜಪ್ಪ ಸ್ಪಷ್ಟಪಡಿಸಿದರು.
ಪಂಚಾಯತ್ ಗಳಲ್ಲಿ ಬೀದಿ ವಿದ್ಯುತ್ ದೀಪದ ಅಳವಡಿಕೆಗೆ ಅನುದಾನ ಇಡಲಾಗುತ್ತದೆ ಅದರೆ ಆದು ಅನುಷ್ಠಾನಕ್ಕೆ ತರಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಇಲ್ಲದೆ ಅನುದಾನ ಬಳಕೆ ಅಗುತ್ತಿಲ್ಲ, ಇದಕ್ಕೆ ಮೆಸ್ಕಾಂ ಇಲಾಖೆ ಕಾರ್ಯಪ್ರವೃತವಾಗಬೇಕು ಎಂದು ಪ್ರಭಾಕರ್ ಪ್ರಭು ಹೇಳಿದರು.
ಈ ಬಗ್ಗೆ ವಿಧಾನ ಸಭೆಯಲ್ಲೂ ಪ್ರಶ್ನಿಸಿದ್ದಾಗಿ ಶಾಸಕ ರಾಜೇಶ ನಾಯ್ಕ್ ತಿಳಿಸಿದರು.
ಕುಕ್ಕಿಪಾಡಿ ಸಬ್ ಸ್ಟೇಷನ್ ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವ ಬಗ್ಗೆ ಪ್ರಭಾಕರ್ ಪ್ರಭು ಅಧಿಕಾರಿಗಳ ಗಮನಕ್ಕೆ ತಂದಾಗ ಶಾಸಕರು ಇಲ್ಲಿನ ಸಮಸ್ಯೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here