ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರಿಯಪಾದೆ ಜಂಕ್ಷನ್‌ನಲ್ಲಿ ಸರಪಾಡಿ ಪಂಚಾಯತ್ ವಲಯದ ಪಂಚಾಯತ್ ಮಿಲನ 2019 ಕಾರ್ಯಕ್ರಮ ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ಪ್ರಚಾರಗೈದು ಜನರ ಮನಸ್ಸನ್ನು ಗೆಲ್ಲುವಂತೆ ಸಲಹೆಯಿತ್ತರು. ಕಾರ್ಯಕರ್ತರು ಶಿಸ್ತಿನ ಸಿಪಾಯಿಯಂತೆ ಪಕ್ಷದ ಸಂಘಟಣೆ ಹಾಗೂ ಬಲವರ್ಧನೆಯಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ.ಬೇಬಿ ಕುಂದರ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಮಾಡುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ಪಕ್ಷದ ತತ್ವ ಸಿದ್ದಾಂತದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಪಕ್ಷವನ್ನು ಬಲಪಡಿಸೋಣ ಎಂದರು. ಮುಂದಿನ ಅವಧಿಗೆ ವಲಯ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸಿ ನೂತನ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ದಯಾನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಬೂತ್ ಸಮಿತಿ ಅಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ಬಾಲ ಕೃಷ್ಣ ಪೂಜಾರಿ ಹಾಗೂ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಪುರುಷೋತ್ತಮ ವಿ.ಬಂಗೇರಾ. ಮಹಿಳಾ ಅದ್ಯಕ್ಷರಾಗಿ  ಕುಸುಮ ಇವರನ್ನು ಅಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಮಾಜಿ ಅಕ್ರಮ ಸಕ್ರಮ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ತಾಲೂಕು ಪಂಚಾಯತ್ ಸದಸ್ಯೆ ಸ್ವಪ್ನ ವಿಶ್ವನಾಥ್, ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಪಿಂಟೊ, ಶಶಿಕಲಾ, ಗೀತಾ, ವೀಕ್ಷಕರಾದ ಸುವರ್ಣ ಕುಮಾರ್ ಜೈನ್, ಮುಖಂಡರಾದ ವರದರಾಜ್ ಅನೆe, ಉಗ್ಗಪ್ಪ ಶೆಟ್ಟಿ, ಬಾಲ ಕೃಷ್ಣ, ಲೋಕೇಶ್ ಪೂಜಾರಿ, ಚಂದ್ರಹಾಸ, ಶ್ರೇಯಸ್ ಜೈನ್, ಮಹಮ್ಮದ್ ಆಸಿಪ್ ಉಪಸ್ಥಿತರಿದ್ದರು. ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಶೆಟ್ಟಿ ಸ್ವಾಗತಿಸಿದರು ರಿಚಾಡ್ ಡಿ’ಸೋಜ ಧನ್ಯವಾದಗೈದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here