ಬಂಟ್ವಾಳ: ಹಗಲುಹೊತ್ತಿನಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳವುಗೈದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಎಸ್.ವಿ.ಎಸ್.ಶಾಲಾ ಬಳಿ ನಡೆದಿದೆ.
ಬಂಟ್ವಾಳ ಬಿ.ಕಸ್ಬಾ ಗ್ರಾಮದ ಎಸ್.ವಿ.ಎಸ್.ಶಾಲಾ ರಸ್ತೆಯ ಭದ್ರಕಾಳಿ ಕಟ್ಟೆಯ ಬಳಿಯಿರುವ ಖಾಸಗಿ ಸರ್ವೇ ಯರ್ ಲೋಹಿತ್ ಎನ್ ಅವರ ಮನೆಗೆ ಯಾರು ಇಲ್ಲದ ವೇಳೆ ನುಗ್ಗಿದ ಕಳ್ಳರು ಮನೆಯೊಳಗೆ ಕೋಣೆಯಲ್ಲಿದ್ದ ಗೊದ್ರೇಜ್ ನ ಬೀಗ ಮುರಿದು ನಗನಗದು ಕಳವು ಮಾಡಿದ್ದಾರೆ.

ಲೋಹಿತ್ ಅವರ ಪತ್ನಿ ವೀಣಾ ಮನೆ ಸಾಮಾಗ್ರಿಗಳನ್ನು ಖರೀದಿ ಮಾಡಲು ಬಂಟ್ವಾಳ ಪೇಟೆಗೆ ಸುಮಾರು 12ರ ಸಮಯ ತೆರಳಿದ ವೇಳೆ ಮನೆ ಕಳವು ನಡೆದಿರಬೇಕು ಎಂದು ಶಂಕಿಸಲಾಗಿದೆ.
ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡ ಕಳ್ಳರು ಮನೆಗೆ ತಾಗಿಕೊಂಡಿರುವ ಬಚ್ಚಲು ಕೊಟ್ಟಿಗೆಯ ಸಿಮೆಂಟ್ ಸೀಟ್ ತೆಗೆದು ಮನೆಯೊಳಗೆ ನುಗಿದ್ದ ಕಳ್ಳರು ಕಪಾಟಿನಲ್ಲಿದ್ದ ಸುಮಾರು 7.7500 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 7.500 ರೂ ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವೀಣಾ ಅವರು ಮನೆಯಿಂದ ಹೊರಗೆ ಹೋಗುವಾಗ ಗೊಡ್ರೆಜ್ ಬೀಗ ಹಾಕಿ ಬೀಗದ ಕೀಯನ್ನು ಅಲ್ಲೇ ಇಟ್ಟಿದ್ದರು.
ಕಳ್ಳರು ಗೊಡ್ರೆಜ್ ಲ್ಲಿದ್ದ 224 ಗ್ರಾಂ ಚಿನ್ನ, 1150 ಗ್ರಾಂ ಬೆಳ್ಳಿಯ ಅಭರಣ ಹಾಗೂ 7.500 ನಗದನ್ನು ಪಡೆದುಕೊಂಡು ಗೊಡ್ರೆಜ್ ಬೀಗ ಹಾಕಿ ಬೀಗವನ್ನು ಜೊತೆಗೆ ಕೊಂಡು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ, ನಗರ ಠಾಣಾ ಎಸ್. ಐ.ಚಂದ್ರಶೇಖರ್, ಪ್ರೋಬೆಸನರಿ ಎಸ್.ಐ.ಗಳಾದ ಕುಮಾರ್ ಮತ್ತು ನಾಗೇಶ್ ಎ.ಎಸ್.ಐ.ಸಂಜೀವ, ಎಚ್.ಸಿ.ಗಳಾದ ಸುರೇಶ್ ಪಡಾರ್, ಉದಯ ರೈ, ಲೋಕೇಶ್, ಸಿಬ್ಬಂದಿ ಶ್ರೀಕಾಂತ್, ಧನ್ಯ ಶ್ರೀ, ವಿವೇಕ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಎ.ಎಸ್.ಪಿ.ಈ ಕಳವು ಪ್ರಕರಣ ಪತ್ತೆಹಚ್ಚಲು ವಿಶೇಷ ತಂಡದ ರಚನೆ ಮಾಡಲಾಗಿದೆ ಎಂದು ಡಿ.ಎಸ್.ಪಿ.ತಿಳಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಡಿ.ವೈ.ಎಸ್.ಪಿ.ಹಾಗೂ ಸಿಬ್ಬಂದಿ ಗಳು ಬೇಟಿ ಪರಿಶೀಲಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here