ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ತುಳು ಲಿಪಿ ಶಿಕ್ಷಕ, ಕಸಾಪ ಮಾಜಿ ತಾಲೂಕು ಅಧ್ಯಕ್ಷ, ಯುವವಾಹಿನಿ ಬಂಟ್ವಾಳ ಸ್ಥಾಪಕಾಧ್ಯಕ್ಷ ಬಿ.ತಮ್ಮಯ್ಯ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬೋವಿನಡಿ ದಿವಂಗತ ಗುಮ್ಮಣ ಪೂಜಾರಿ ಮತ್ತು ಚಿಕ್ಕಮ್ಮ ದಂಪತಿಗಳ ಪುತ್ರರಾಗಿ 1948ರಲ್ಲಿ ಜನನ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಡಶಿಕ್ಷಣವನ್ನು ನೆರಿಯಲದಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಧರ್ಮಸ್ಥಳದಲ್ಲಿ ಪೂರೈಸಿದರು.

ಹೈಸ್ಕೂಲಿನಲ್ಲಿ ಕಬಡ್ಡಿ, ವಾಲಿಬಾಲ್, ಯಕ್ಷಗಾನ,ನಾಟಕಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ತಮ್ಮಯರು ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು.
ತುಳು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ, ಯಕ್ಷಗಾನದಲ್ಲಿ ವೇಷಧಾರಿಯಾಗಿ ಕೂಡಾ ಅಭಿನಯಿಸಿದ ಕಲಾವಿದ ತಮ್ಮಯರು.

ಉಜಿರೆಯಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ,1972ರಲ್ಲಿ ಮಂಗಳೂರಿನ ಕಸ್ಬಾ ಗ್ರಾಮದಲ್ಲಿ ಗ್ರಾಮ ಕರಣಿಕರ ಹುದ್ದೆಗೆ ಸೇರ್ಪಡೆಗೊಂಡ ಸಮಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದುಕೊಂಡರು. ಬಂಟ್ವಾಳ ತಾಲೂಕಿಗೆ ವರ್ಗಾವಣೆಗೊಂಡ ಬಳಿಕ ವಿವಿಧ ಗ್ರಾಮ ಪಂಚಾಯತುಗಳಲ್ಲಿ ಕಾರ್ಯನಿರ್ವಹಿಸಿ, 2001ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಂದಾಯ ಅಧಿಕಾರಿಯಾಗಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಸೇವೆ ಸಲ್ಲಿಸಿ 2006ರಲ್ಲಿ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು.
1974ರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ ಅನುಭವ ಇವರದ್ದು.

ಬಂಟ್ವಾಳ ಸರಕಾರಿ ನೌಕರರ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷನಾಗಿ. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಪ್ರಶಂಸನೀಯ.
ಕಂದಾಯ ನೌಕರರ ಸಂಘದ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ,
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನಲ್ಲಿ 10ವರ್ಷ ಕಾರ್ಯದರ್ಶಿಯಾಗಿ, 4 ವರ್ಷ ಅಧ್ಯಕ್ಷರಾಗಿ ಇದೀಗ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರು ತಮ್ಮಯರು. ಹಣತೆ ,ಕಾಡಿನ ಹಕ್ಕಿ ಹಾಡಿತು, ಶ್ರೀ ನಾರಾಯಣಗುರು ಭಜನೆ, ತಟಪಟ, ಹನಿಪನಿ, ಹನಿಕವಿತೆ ರಚಿಸಿ ಮೊದಲಾದ 6 ಕವನ ಸಂಕಲನ ರಚಿಸಿದ್ದಲ್ಲದೆ, ಚಿಂತನ-ಮಂಥನ ಲೇಖನಗಳ ಸಂಗ್ರಹ, ಹಿಂದಿರುಗಿ ನೋಡಿದಾಗ-ಆತ್ಮಕಥೆ, ಕರಿಕೋಟು ಕಥಾ ಸಂಕಲನಗಳನ್ನು ರಚಿಸಿದ್ದಾರೆ.
ತುಳುವೆರೆ ಪರ್ಬ ತುಳು ಲಿಪಿ ಮತ್ತು ಕನ್ನಡದಲ್ಲಿ ಕವನ ಸಂಕಲನ ಹೊರತರಲಾಗಿದೆ.
‘‘ತುಳುವೆ’’ ಎಂಬ ತುಳು ಭಾಷಾ ಲಿಪಿಯ ಮೊದಲ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತಿದ್ದಾರೆ. ತುಳು ಭಾಷಾ ಆಸಕ್ತರಿಗಾಗಿ ತುಳು ಲಿಪಿ ಕಲ್ಪುಲೆ ಎಂಬ ಪುಸ್ತಕವನ್ನು ಹೊರತಂದು ತಾವು ತುಳು ಲಿಪಿ ಶಿಕ್ಷಕನಾಗಿ ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತುಳು ಲಿಪಿಯನ್ನು ಕಲಿಸಿದ್ದಾರೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಈ ವಿಶೇಷ ಸಾಧನೆಯನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿಯಿಂದ ಚಾವಡಿ ತಮ್ಮನ ನೀಡಿ ಸನ್ಮಾನಿಸಲಾಗಿದೆ.
ಒಳಾಂಗಣದಲ್ಲಿ ಧರಿಸಲು ಉಪಯೋಗಿಸುವ ‘‘ಹಾಳೆ ಚಪ್ಪಲಿ”ಯನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಅಡಿಕೆ ಹಾಳೆಯಿಂದ ಚೀಲ, ಹೇಟ್, ಬೀಸಣಿಕೆ ಮೊದಲಾದುವನ್ನು ರಾಷ್ಟ್ರೀಯ ಸೇವಾ ಯೋಜನೆ ಮಕ್ಕಳಿಗೆ ತಯಾರಿಸಲು ತರಬೇತಿ ನೀಡುವುದು,
ಹೀಗೆ ಸರಕಾರಿ ನೌಕರಿಯಲ್ಲಿದ್ದುಕೊಂಡು ಸಾರ್ವಜನಿಕರೊಡನೆ ನಿರಂತರ ಸಂಪರ್ಕವನ್ನಿರಿಸಿಕೊಂಡು. ಪತ್ನಿ ಇಂದುಮತಿ, ಮಗ ನಿಶಾಂತ್ ಕುಮಾರ್ ಹಾಗೂ ಸೊಸೆಯೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here