

ಬಂಟ್ವಾಳ: ಪಣೋಲಿಬೈಲಿನ ವ್ಯಕ್ತಿಯೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣೋಲಿಬೈಲು ನಿವಾಸಿ ವಿಠ್ಠಲ ಪೂಜಾರಿ (45)ಕಾಣೆಯಾದವರು. ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಮಲಗಿದ ವಿಠಲ ಪೂಜಾರಿ
ಇಂದುಬೆಳಗ್ಗಿನ ಜಾವ ಮನೆಯಿಂದ ಕಾಣೆಯಾಗಿರುತ್ತಾರೆ ಎಂದು ಅವರ ಪತ್ನಿ ಶಾಲಿನಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮುಂಜಾನೆ ಸುಮಾರು ಮೂರವರೆ ಗಂಟೆಯ ವೇಳೆ ಕಾರಾಜೆ ಪರಿಸರದಲ್ಲಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರು ಎಂಬ ಮಾಹಿತಿಯನ್ನು ಸ್ಥಳೀಯ ಮೀನು ಮಾರಾಟ ಮಾಡುವ ವ್ಯಕ್ತಿಯೋರ್ವರು ಪೋಲೀಸರಿಗೆ ತಿಳಿಸಿದ್ದಾರೆ.
ಕೆಂಪು ಬಣ್ಣದ ಅಂಗಿ ಮತ್ತು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕವರು ಬಂಟ್ವಾಳ ನಗರ ಠಾಣೆಗೆ ಅಥವಾ 9731530124 ಈ ಸಂಖ್ಯೆಗೆ ತಕ್ಷಣ ಮಾಹಿತಿ ನೀಡಬೇಕಾಗಿ ವಿನಂತಿ.







