


ಬಂಟ್ವಾಳ : ಶ್ರೀರಾಮ ಪದವಿ ಕಾಲೇಜು ಇದರ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳ ಸಂಘಟನೆ ಎಂಬ ವಿಷಯದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರಿನ ಸ್ವಯಂಸೇವಕ ಸಂಘ ಇದರ ಜಿಲ್ಲಾ ಮಾನ್ಯ ಸಂಘ ಚಾಲಕ್ರಾದ ಕಾಂತಪ್ಪ ಶೆಟ್ಟಿ ಕೊಡ್ಮನ್ ಇವರು ದೀಪ ಬೆಳಗಿಸಿ, ಸಂಘಟನಾತ್ಮಕ ಭಾವನೆಯಿಂದ ಕೂಡಿದ ಸಮಾಜ ನಿರ್ಮಾಣವಾಗಬೇಕು. ಒಗ್ಗಟ್ಟಿನಿಂದ, ಸಕಾರಾತ್ಮಕ ಭಾವನೆಯಿಂದ ಕೆಲಸ,ಕಾರ್ಯಗಳನ್ನು ನಡೆಸಿದರೆ ಭವ್ಯ ಭಾರತ ಕಾಣಲು ಸಾಧ್ಯ ಎಂದು ಹೇಳುತ್ತಾ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ನಾಟಕದ ಮೂಲಕ ನೃತ್ಯ, ಗೀತೆ, ಮೂಕಾಭಿನಯ, ದೃಶ್ಯ ಮಾಧ್ಯಮದೊಂದಿಗೆ ಸಂಘಟನಾ ಎಂಬ ತತ್ವವನ್ನು ತಮ್ಮ ಪ್ರತಿಭೆಗಳ ಮೂಲಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ವೇಘಾಶಿನಿ ಸ್ವಾಗತಿಸಿ, ಯಶ್ವಿತ್ ವಂದಿಸಿದರು. ಕಾರ್ಯಕ್ರಮವನ್ನು ಜೀವನ್ ಇವರು ನಿರೂಪಿಸಿದರು.







