

ನಿಸ್ವಾರ್ಥ ಸೇವೆ ಎಂದು ಕೇಳಿದಾಗ ಮೂಡುವ ಚಿತ್ರಣವೆಂದರೆ ಒಬ್ಬ ವ್ಯಕ್ತಿ/ ಒಂದು ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇನ್ನೊಬ್ಬರ/ ಪರರ ಕಷ್ಟಗಳ ಜೊತೆಗೂಡಿ ಭಾಗಿಯಾಗುವ ಸೇವಾ ಮನೋಭಾವ. ಈ ನಿಸ್ವಾರ್ಥ ಸೇವೆ ಎಲ್ಲಿ ಇರುತ್ತದೆಯೋ ಅಲ್ಲಿ ಸಿಗುವ ಮನೋಲ್ಲಾಸ ಬೇರೆಲ್ಲೂ ಸಿಗಲ್ಲ, ಆದರೆ ಇಂದಿನ ಸಮಾಜದಲ್ಲಿ ಕೆಲ ಸ್ವಪ್ರತಿಷ್ಠಿಗಳು ಅಧಿಕಾರದ ಆಸೆಗಾಗಿ ಸ್ವಾರ್ಥಕ್ಕಾಗಿ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಿದ್ದನ್ನು ಕಾಣಬಹುದೇ ಹೊರತು ನಿಸ್ವಾರ್ಥ ಸೇವಾ ಮನೋಭಾವವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಇಂದಿನ ಸಮಾಜ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಗೆ ಒಂದು ಬೆಲೆ ಇದೆ ಆ ಬೆಲೆಗೆ ದೇವರ ಅನುಗ್ರಹದ ವರ್ಷದಾರೆ ಇದೆ ಎನ್ನುವ ಸತ್ಯವನ್ನು ಸೇವಾ ಮನೋಭಾವ ಹೊಂದಿರುವ ಯುವ ಸೇವಾ ಮಾಣಿಕ್ಯರಾದ ಅಕ್ಷಯ್ ಪೂಜಾರಿ ಕಿನ್ನಿಬೆಟ್ಟು, ಯತೀಶ್ ಮುಲ್ಕಿ, ತಿಲಕ್ ಪೂಜಾರಿ, ಪುಷ್ಪರಾಜ್ ಸಚಿನ್ ಶೆಟ್ಟಿ, ಇವರ ಹುಟ್ಟು ಹಬ್ಬದ ಪ್ರಯುಕ್ತ ಕಳೆದ 3 ವರುಷಗಳಿಂದ ಮಾನಸಿಕ ಬುದ್ದಿ ಮಾಂದ್ಯ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಕಳದ ಪರಪ್ಪುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಕಿನ್ನಿಬೆಟ್ಟು ಹಾಗೂ ಮುಲ್ಕಿ ಫ್ರೆಂಡ್ಸ್ ವತಿಯಿಂದ ವಿಜೇತ ವಿಶೇಷ ಶಾಲೆಗೆ 1 ಟೇಬಲ್ ನ್ನು ಈ ಸಮಯದಲ್ಲಿ. ಹಸ್ತಾಂತರಿಸಿದರು. ಈ ಶುಭ ಘಳಿಗೆಯಲ್ಲಿ ಶಾಲೆಯ ಸ್ಥಾಪಕರಾದ ಡಾ|ಕಾಂತಿ ಹರೀಶ್ ರವರು ಜನುಮ ದಿನದ ಸೇವಾರ್ಥಿಗಳಿಗೆ ಆರತಿ ಮಾಡಿ ಹಣೆಗೆ ತಿಲಕ ಇಟ್ಟು ಆಶೀರ್ವಾದಿಸಿ ಶುಭ ಹಾರೈಸಿದರು. ಸುಧಾಕರ್ ಕುಲಾಲ್, ಸುಧೀರ್ ಪೂಜಾರಿ, ನಿಶಾಂತ್ ಕಿನ್ನಿಬೆಟ್ಟು, ಗಣೇಶ್ ಕುಲಾಲ್ , ಅವಿನಾಶ್, ಭಾರತ ಮಾತೆಯ ವೀರ ಪುತ್ರ ಸುಧ ಶೆಟ್ಟಿ , ಪ್ರಕಾಶ್ ಪೂಜಾರಿ, ಸಾಹಿತಿ ಪ್ರತಾಪ್ ಭಾರದ್ವಾಜ್, ಆರ್ ಸಿ ತುಳುನಾಡು, ಶಾಲೆಯ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.








