

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಬಜರಂಗದಳ ಸಂಘಟನೆಯನ್ನು ನಿಂದಿಸಿ ಅಪಪ್ರಚಾರ ಮಾಡಿದ ವ್ಯಕ್ತಿಯ ಮೇಲೆ ಬಜರಂಗದಳ ಸಂಘಟನೆಯಿಂದ ದೂರು ದಾಖಲು. ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಲೋಹಿತ್ ಪನೋಲಿಬೈಲು ಬಜರಂಗದಳ ಪ್ರಮುಖರಾದ ದೀಪಕ್ ಕೋಟ್ಯಾನ್ ಸಜಿಪ ,ಈಶ್ವರ್ ವಿಟ್ಲ, ಮತ್ತು ನಾಗರಾಜ್ ವಿಟ್ಲ ಇವರು ಬಂಟ್ವಾಳ ನಗರ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿ ಬಜರಂಗದಳದ ನಿಂದಕರನ್ನು ಬಂಧಿಸುವಂತೆ ಒತ್ತಾಯಿಸಿದರು.








