ಬಂಟ್ವಾಳ: ಗ್ರಾಮೀಣ ಭಾಗದ ಪ್ರತಿಭೆಯೊಂದು ಬೆಂಗಳೂರಿನ ಕಲರ್ಸ್ ಕನ್ನಡ ಟಿ.ವಿಯ ಕಾಮಿಡಿ ಕಂಪೆನಿಯಲ್ಲಿ ಕಾಮಿಡಿ ನಟನಾಗಿ ಮಿಂಚುತ್ತಿದ್ದಾನೆ.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಅತ್ತಾಜೆ ನಿವಾಸಿ ಚಂದಪ್ಪ ಪೂಜಾರಿ ಹಾಗೂ ತೇಜಾಕ್ಷಿ ಅವರ ಪುತ್ರ ಸಚಿನ್ ಅತ್ತಾಜೆ ಅವರು ಮಿಂಚುತ್ತಿರುವ ಕಾಮಿಡಿ ನಟ.
ನಾಟಕದಿಂದ ನಟನೆಯತ್ತ ಹೆಜ್ಜೆಹಾಕಿದ ಸಚಿನ್ ಅವರು ಪ್ರಸ್ತುತ ಕಲರ್ಸ್ ಕನ್ನಡದ ಕಾಮಿಡಿ ಕಂಪನಿಯಲ್ಲಿ ಒಬ್ಬ ಅಪ್ರತಿಮ ಕಾಮಿಡಿ ನಟನೆಯ ಮೂಲಕ ಜನರ ಮನರಂಜಿಸುತ್ತಿದ್ದಾರೆ.
ಪ್ರತಿ ದಿನ ದುಡಿದರೆ ಮಾತ್ರ ಇವರ ಜೀವನ , ಅಂತ ಕಷ್ಟದ ಕುಟುಂಬದಲ್ಲಿ ಬೆಳೆದು ಬಂದ ಹಳ್ಳಿಯ ಹುಡುಗ ಕಲಿತದ್ದು ಕೇವಲ 8 ನೇ ಕ್ಲಾಸು.
ಕಷ್ಟದ ಜೀವನಕ್ಕಾಗಿ ಅರ್ಧದಲ್ಲಿ ಶಿಕ್ಷಣಕ್ಕೆ ಗುಡ್ ಬೈ ಹೇಳಿದ ಸಚಿನ್ ಜೀವನದ ರಥಕ್ಕಾಗಿ ಆಯ್ಕೆ ಮಾಡಿದ್ದು ಕೂಲಿ ಕೆಲಸ.
ಕಟ್ಟಡ ನಿರ್ಮಾಣದ ಮೇಸ್ತ್ರಿ ಕೆಲಸಗಾರರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ನಾಟಕ ಅಭಿಯನದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸಚಿನ್ ಅವರ ಮುಂದಿನ ದಿನಗಳು ವರ್ಣರಂಜಿತ.
ಪುಂಜಾಲಕಟ್ಟೆ ಎಂಬುದು ರಾಜಕೀಯ , ಕಲೆ, ಸಾಹಿತ್ಯ, ಸಾಮಾಜಿಕ , ಹೋರಾಟ ಹೀಗೆ ಅನೇಕ ತಾಣಗಳ ತವರೂರು.
ಹಾಗಾಗಿ ಅನೇಕ ಕಲೆಗಳಿಗೆ ಪ್ರೋತ್ಸಾಹ ನೀಡುವ ಅನೇಕ ಸಂಘಸಂಸ್ಥೆಗಳು ಇಲ್ಲಿವೆ.

ಸಚಿನ್ ಕೂಡಾ ಇಲ್ಲಿಂದಲೇ ತನ್ನ ನಟನೆಗೆ ಹೆಜ್ಜೆ ಹಾಕಿದ್ದು. ಪುಂಜಾಲಕಟ್ಟೆಯ ಮುರುಘೇಂದ್ರ ಮಿತ್ರಮಂಡಳಿಯವರ ನಾಟಕ ತಂಡದಲ್ಲಿ ರತ್ನ ದೇವ್ ಪುಂಜಾಲಕಟ್ಟೆಯವರ ನಿರ್ದೇಶನದ ಅಜ್ಜಿಗ್ ಏರಲಾ ಇಜ್ಜಿ ಎಂಬ ನಾಟಕದಲ್ಲಿ ಪ್ರಥಮವಾಗಿ ಕಾಮಿಡಿ ನಟನಾಗಿ ರಂಗಪ್ರವೇಶ ಮಾಡಿದ ಈತ ಬಳಿಕ ” ತಾಂಬೂಲ” ಕಲಾ ತಂಡದಲ್ಲಿಯೂ ನಟನೆ ಮಾಡಿದ್ದಾನೆ. ಪ್ರಸ್ತುತ ಕೈಕಂಬದ “ವಿಧಾತ್ರಿ” ತಂಡದಲ್ಲಿ ಕಾಮಿಡಿ ನಟನಾಗಿ ಮಿಂಚುತ್ತಿರುವಾಗಲೇ ಅತನಿಗೆ ಕಲರ್ಸ್ ಕನ್ನಡ ಕಾಮಿಡಿ ಕಂಪೆನಿಯಲ್ಲಿ ನಟನೆಗೆ ಅವಕಾಶ ಸಿಗುತ್ತದೆ.
ಇದರ ಜೊತೆಗೆ ಈತ ಎರಡು ತುಳು ಸಿನೆಮಾದಲ್ಲೂ ನಟನೆ ಮಾಡಿದ್ದು ಇನ್ನೇನು ಬಿಡುಗಡೆಗೆ ಮಾತ್ರ ಬಾಕಿ ಉಳಿದಿದೆ.
ಅಲ್ಲದೆ ಮಂತ್ರದೇವತೆ ಕ್ರಿಯೇಷನ್ ನವರ ಅಲ್ಬಮ್ ಸಾಂಗ್ ಹಾಗೂ ಟೆಲಿ ಪಿಲ್ಮಿನಲ್ಲಿಯೂ ಈತ ಕಾಮಿಡಿ ನಟನಾಗಿ ಅಭಿನಯಿಸಿದ ಒಬ್ಬ ಅತ್ಯುತ್ತಮ ಕಲಾವಿದ.
ಈತನ ನಟನೆಗೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಸಹಿತ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನ ಮಾಡಿದೆ
ಒಬ್ಬ ಉತ್ತಮ ಕಾಮಿಡಿ ನಟನಿಗೆ ಇನ್ನಷ್ಟು ಉತ್ತಮ ಅವಕಾಶಗಳು ಬರಲಿ ಎಂಬುದೇ ಹಾರೈಕೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here