ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ತಮಗೆ ಶಿಕ್ಷಣ ಬೋಧಿಸುತ್ತಿರುವ ತಮ್ಮ ಉಪನ್ಯಾಸಕರ ಶಿಕ್ಷಕರನ್ನು ಕಾಲೇಜಿಗೆ ಆಹ್ವಾನಿಸಿ ಶಿಕ್ಷಕ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ವಿಠ್ಠಲ ಸ್ಮಾರಕ ಪ್ರೌಢ ಶಾಲೆ ಕುರುಡುಪದವು ಇಲ್ಲಿಯ ಕನ್ನಡ ಶಿಕ್ಷಕ ಶ್ರೀಪತಿ ಭಟ್, ವಿಠ್ಠಲ ಪದವಿಪೂರ್ವ ಕಾಲೇಜು ಇಲ್ಲಿಯ ಇತಿಹಾಸ ಉಪನ್ಯಾಸಕ ಅಣ್ಣಪ್ಪ ಶಾಸ್ತಾನ, ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದಯಾನಂದ ನಾಯಕ್, ವಿಠ್ಠಲ ಪ್ರಥಮದರ್ಜೆ ಕಾಲೇಜು ವಿಟ್ಲ ಇದರ ಸಹಾಯಕ ಪ್ರಾಧ್ಯಾಪಕ ಚಕ್ರೇಶ್ವರಿ, ಎಸ್‌ವಿಎಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ.ರಾಜಮಣಿ ರಾಮಕುಂಜ, ಕರ್ನಾಟಕ ಪ್ರೌಢ ಶಾಲೆ ಮಾಣಿ ಇದರ ಮುಖ್ಯೋಪಾಧ್ಯಾಯರಾದ ಬಿ ಕೆ ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಶಿಸ್ತು, ಕ್ಷಮೆ, ಕರುಣೆ ಇದ್ದರೆ ಗುರುವಿನ ಬದುಕು ಯಶಸ್ವಿಯಾಗಲು ಸಾಧ್ಯ. ವಿದ್ಯಾರ್ಥಿಯ ಬದುಕನ್ನು ತಾವೇ ತಿದ್ದಿಕೊಳ್ಳಲು ಪೂರಕ ವಾತಾವರಣ ಸೃಷ್ಟಿಸುವುದು ಶಿಕ್ಷಕನ ಜವಾಬ್ದಾರಿ ಎಂಬಂತೆ ಹಿರಿಯ ಉಪನ್ಯಾಸಕರು ತಮ್ಮ ಗುರುಗಳಿಗೆ ಪಾದಪೂಜೆಯನ್ನು ಮಾಡಿ ಶಾಲು ಹೊದಿಸಿ ಗೌರವಿಸಿದರು.ವಿದ್ಯಾರ್ಥಿಗಳು ಉಳಿದ ಎಲ್ಲಾ ಉಪನ್ಯಾಸಕರಿಗೆ ಪುಷ್ಪ ಕೊಟ್ಟು ಶುಭಾಶಯ ಪತ್ರವನ್ನು ನೀಡಿ ಶುಭಾಶಯ ಕೋರಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ರಚಿಸಿದ ತಾಯಿಯೇ ಮೊದಲ ಗುರು ಎಂಬ ಕಿರುಚಿತ್ರವನ್ನು ಪ್ರಸ್ತುತಪಡಿಸಿದರು. ಭವಿಷ್ಯದ ಶಿಕ್ಷಕರನ್ನು ರೂಪಿಸುವ ಭವಿಷ್ ಘಟಕಕ್ಕೆ ಸೇರ್ಪಡೆಗೊಂಡ ಪ್ರಥಮ ಪದವಿಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸಂಕಲ್ಪವನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ, ಉಪನ್ಯಾಸಕರು ಉಪಸ್ಥಿತರಿದ್ದರು. ನಿರೀಕ್ಷಾ ಅಂತಿಮ ಬಿ.ಕಾಂ ಸ್ವಾಗತಿಸಿ, ತ್ರಿವೇಣಿ ಅಂತಿಮ ಬಿ.ಕಾಂ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಚೈತ್ರಾ ಮತ್ತು ಭವಾನಿ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here