ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಇದರ ಆಶ್ರಯದಲ್ಲಿ ನಡೆದ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶನಿಗೆ
ಶ್ರೀರಾಮ ಗೆಳೆಯರ ಬಳಗ ಕೈಕಂಬ ಬಿ ಸಿ ರೋಡು ಇವರ ವತಿಯಿಂದ ಕೈಕಂಬ ಪೊಳಲಿ ದ್ವಾರದಿಂದ ಬಿ ಸಿ ರೋಡು ತನಕ ಮೆರವಣಿಗೆಯಲ್ಲಿ ಸಾಗಿ ಬೃಹದಾಕಾರದ ಹರಳು ಉಂಡೆ ಹಾರವನ್ನು ಗಣೇಶನಿಗೆ ಅರ್ಪಿಸಿದರು.
ಕೈಕಂಬ ಪೊಳಲಿ ದ್ವಾರದಿಂದ ಬಿ ಸಿ ರೋಡು ತನಕ ಮೆರವಣಿಗೆಯಲ್ಲಿ ಸಾಗಿದ ಸಂದರ್ಭ ಭಕ್ತರು ಬೃಹತ್ ಗಾತ್ರದ ಹರಳು ಉಂಡೆ ಹಾರವನ್ನು ಗಣೇಶನಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ, ಉಪಾಧ್ಯಕ್ಷ ಶೈಲೇಶ್ ಕೈಕಂಬ, ಜಗದೀಶ್ ಕಾರ್ಯದರ್ಶಿ, ಗೌರವ ಸಲಹೆಗಾರ ರಮೇಶ್, ಮೆಲ್ವಿಚಾರಕ ಮಚ್ಚೆಂದ್ರ ಸಾಲಿಯಾನ್ ಗುರುಕೃಪ ಹಾಗೂ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಬಿ ಸಿರೋಡಿನ ಗಣೇಶನಿಗೆ ಅರ್ಪಿಸಿದ ಹರಳುಂಡೆಗಳ ಸಂಖ್ಯೆ 3500 ಇದು ಐದನೇ ವರ್ಷದ ಸೇವೆ ಎನ್ನುತ್ತಾರೆ ಅದರ ಅಧ್ಯಕ್ಷ ಸದಾಶಿವ ಕೈಕಂಬ 10 ಅಡಿ ಉದ್ದದ ಹರಳುಂಡೆ ಮಾಲೆಯನ್ನು ಮೆರವಣಿಗೆ ಬಳಿಕ ಸೇರಿದವರಿಗೆಲ್ಲ ಸೇವೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here