ಮುಂಬಯಿ, ಸೆ.೦೫: ‘ಬೋಧನೆ ಎಂಬುದು ವ್ಯಕ್ತಿಯ ಪಾತ್ರ, ಸಾಮರ್ಥ್ಯ ಮತ್ತು ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿರುವ ಉದಾತ್ತ ವೃತ್ತಿ. ಜನರು ನನ್ನನ್ನು ಒಬ್ಬ ಉತ್ತಮ ಶಿಕ್ಷಕ ಎಂದು ಗುರುತಿಸಿ, ನೆನಪಿಸಿಕೊಂಡರೆ ಅದು ನನಗೆ ದೊಡ್ಡ ಗೌರವವಾಗುತ್ತದೆ’ ಹೀಗೆಂದು ಹೇಳಿದವರು ನಮ್ಮ ದೇಶದ ಮಾಜಿ ರಾಷ್ಟ್ರಪತಿ ಡಾ| ಎ ಪಿ ಜೆ ಅಬ್ದುಲ್ ಕಲಾಮ್. ಇದು ಅವರ ಅಂತರಾಳದ ಮಾತಾಗಿದ್ದು, ಶಿಕ್ಷಕನ ಬಗ್ಗೆ ಅವರು ಹೇಳಿರುವ ಈ ಮಾತು ಅತ್ಯಂತ ಸೂಕ್ತವಾದುದಾಗಿದೆ ಮತ್ತು ಶಿಕ್ಷಕನ ಬಗ್ಗೆ ಅವರು ಬಳಸಿರುವ ಪದಗಳು ಶಿಕ್ಷಕ ವೃತ್ತಿಯ ಮೂಲತತ್ತ್ವವನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ಸಮಾಜವನ್ನು ರೂಪಿಸುವ ಶಿಲ್ಪಿಯಾಗಿರುವ ಶಿಕ್ಷಕ ತನ್ನ ಇಡೀ ಜೀವನವನ್ನು ಬೋಧನೆಗಾಗಿ ಮುಡಿಪಾಗಿಡುತ್ತಾನೆ. ಶಿಕ್ಷಕರ ಈ ತ್ಯಾಗ ಜೀವನದ ಸ್ಮರಣೆಗಾಗಿ ಶಿಕ್ಷಕರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು, ಅದುವೇ ಸೆ ೫ ನೇ ತಾರೀಖು. ಈ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತಾ ಬಂದಿದ್ದೇವೆ. ಹೌದು, ಸೆ ೫ ರಂದು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಸುಪ್ರಸಿದ್ಧ ಶಿಕ್ಷಕ ಮತ್ತು ತತ್ತ್ವಜ್ಞಾನಿ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮ ದಿನವಾಗಿದ್ದು, ಅವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಶಿಕ್ಷಕರು ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವಲ್ಲಿ ಮಾಡಿದ ತ್ಯಾಗಕ್ಕಾಗಿ ಅವರನ್ನು ಗೌರವಿಸುವ ನಿಟ್ಟಿನಲ್ಲಿ ಆಯ್ದೊಕೊಂಡಿರುವ ದಿನವೂ ಇದಾಗಿದ್ದು, ಬಹಳ ಸೂಕ್ತವಾದ ದಿನವನ್ನೇ ಆಯ್ದುಕೊಳ್ಳಲಾಗಿದೆ.


ಈ ದಿನವನ್ನು ರಾಷ್ಟ್ರದ ಮತ್ತು ಇಡೀ ಮಾನವಕುಲದ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರಿಗಾಗಿ ಮೀಸಲಿಡಲಾಗಿದ್ದು, ಈ ಮೂಲಕ ಸಾವಿರಾರು ಮನಸ್ಸುಗಳ ಮೇಲೆ ಪ್ರಭಾವ ಬೀರಿದ ಶಿಕ್ಷಕರ ಜೀವನಾದರ್ಶಗಳಿಂದ ನಾವೆಲ್ಲ ಸ್ಪೂರ್ತಿ ಪಡೆಯೋಣ. ಶಿಕ್ಷಕರು ಇಂದು ತಮ್ಮ ವಿದ್ಯಾರ್ಥಿಗಳಲ್ಲಿ ಭಿತ್ತಿದ ಮೌಲ್ಯಗಳೆಂಬ ಬೀಜ ಮುಂದಿನ ಜನಾಂಗದ ಮೇಲೆ ಪ್ರಭಾವ ಬೀರುತ್ತಿದೆ. ಈ ಪ್ರಭಾವಗಳು ನಮ್ಮ ಕಲ್ಪನೆಗೂ ಮೀರಿದ ಭವಿಷ್ಯವನ್ನು ಸೃಷ್ಟಿಸುತ್ತದೆ. ಶಿಕ್ಷಕರ ಬೋಧನಾ ವೃತ್ತಿಯನ್ನು ಉದಾತ್ತ ವೃತ್ತಿಯೆಂದು ಪರಿಗಣಿಸಲಾಗಿದೆ ಏಕೆಂದರೆ ಶಿಕ್ಷಕರು ವಿದ್ಯಾಥಿsಗಳಿಗೆ ಜ್ಞಾನವನ್ನು ಧಾರೆಯೆರುವುದು ಮಾತ್ರವಲ್ಲದೆ ಮಕ್ಕಳಲ್ಲಿರುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಅನ್ವೇಷಿಸಿ ಹೊರತರುವಲ್ಲಿ ಸಹಾಯ ಮಾಡುತ್ತಾರೆ ಆ ಮೂಲಕ ವಿದ್ಯಾಥಿsಗಳನ್ನು ಜವಾಬ್ದಾರಿಯುತ ಮಾನವರಾಗಿ ರೂಪಿಸಿ ಬೆಳೆಸಲು ನೆರವಾಗುತ್ತಾರೆ. ಹಾಗಾಗಿ ಶಿಕ್ಷಕರು ನಮ್ಮ ಸಮಾಜದ ಕಂಬಗಳಂತೆ. ಮಕ್ಕಳಲ್ಲಿರುವ ಉತ್ತಮ ಮೌಲ್ಯಗಳನ್ನು ಹೊರತರುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಉದಾತ್ತ ಮೌಲ್ಯಗಳನ್ನು ಬೋಧಿಸುವ ಮೂಲಕ ಶಿಕ್ಷಕರು ಎಳೆ ಮನಸ್ಸುಗಳ ಮೇಲೆ ಪ್ರಭಾವ ಬೀರಿ, ಅವರ ಮನಸ್ಸಿನಲ್ಲಿ ಆದರ್ಶಗಳ ಬೀಜವನ್ನು ಭಿತ್ತಿ, ಆ ಮನಸ್ಸುಗಳಿಗೆ ಒಂದು ರೂಪ ಕೊಟ್ಟು ವಿಶೇಷ ವ್ಯಕ್ತಿತ್ವವಾಗಿ ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಆತ್ಮೀಯ ಶಿಕ್ಷಕರೇ, ನಾವೆಲ್ಲರೂ ಶಿಕ್ಷಣ ಎಂದು ಕರೆಯುವ ‘ಜ್ಞಾನೋದಯ’ ಪ್ರಕ್ರಿಯೆಯ ಅತ್ಯಂತ ಮಹತ್ವದ ಅಂಗವಾಗಿ ನೀವು ಉಳಿದುಕೊಂಡಿದ್ದೀರಿ ಎಂಬುದು ನಮಗೆಲ್ಲರಿಗೂ ಹೆಮ್ಮೆ ಮತ್ತು ಸಂತೋಷದ ವಿಷಯ. ನೀವು ಇಂದಿನ ಜನಾಂಗದ ವ್ಯಕ್ತಿತ್ವವನ್ನು ಸಬಲೀಕರಣಗೊಳಿಸುವುದು ಅಲ್ಲದೆ ಮುಂಬರುವ ಜನಾಂಗದ ಜವಾಬ್ದಾರಿಯುತ ವ್ಯಕ್ತಿತ್ವ ರೂಪಿಸುವ ನಿರ್ದೇಶಕರಾಗಿದ್ದೀರಿ. ತಂತ್ರಜ್ಞಾನದ ಈ ಯುಗದಲ್ಲಿ, ತಂತ್ರಜ್ಞಾನವು ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಫಲಾನುಭವಿಗಳು ಮತ್ತು ನಿರಂತರ ಒಡನಾಡಿಗಳಾಗಿರುವ ನೀವು ಅದಕ್ಕೆ ಸೂಕ್ತವಾಗಿ ಮೌಲ್ಯಯುತ ಮಾನವ ಸ್ಪರ್ಶವನ್ನು ನೀಡುವುದು ಮತ್ತು ಅವುಗಳು ಮುಂದಿನ ಜನಾಂಗದವರೆಗೆ ಉಳಿಯುವಂತೆ ಮೌಲ್ಯಗಳನ್ನು ತುಂಬುವುದು ನಿಮ್ಮ ಜವಾಬ್ಧಾರಿಯಾಗಿದೆ. ಹಾಗಾಗಿ ನಾವು, ಇಂದಿನ ದಿನ ಅಂದರೆ ಶಿಕ್ಷಕರ ದಿನ, ಎಲ್ಲಾ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ನಮ್ಮ ಎಲ್ಲಾ ಹಳೆ ವಿದ್ಯಾಥಿsಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ಇದು ನಮ್ಮ ಹಳೆ ವಿದ್ಯಾಥಿsಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲ ಮತ್ತು ಅವರ ಜೀವನಕ್ಕೆ ಮೌಲ್ಯಗಳನ್ನು ತುಂಬಿದ ಶಿಕ್ಷಕರಿಗೆ ಸಲ್ಲುವ ಗೌರವ. ಶಿಕ್ಷಕರ ದಿನವಾದ ಇಂದು ಶಿಕ್ಷಕರಲ್ಲಿ ನಮ್ಮ ಕೋರಿಕೆಯೇನೆಂದರೆ, ಜೀವನ ಮತ್ತು ಸಮಾಜವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿ ಪೋಷಿಸುವ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರೇ, ಶಿಕ್ಷಣವೆಂಬ ಉದಾತ್ತ ಪ್ರಕ್ರಿಯೆಗೆ ನಿಮ್ಮ ಕೊಡುಗೆ ಅಪಾರವಾಗಿದ್ದು, ಅದಕ್ಕಾಗಿ ನೀವು ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿನ ಒಳಗೆ ಸುಪ್ತವಾದ ಪ್ರತಿಭೆ ಮತ್ತು ಸಾಮರ್ಥ್ಯದ ಸಂಪತ್ತು ಇದೆ. ಶಿಕ್ಷಕರಾಗಿ ನೀವು ಮಗುವಿನ ಈ ಪ್ರತಿಭೆಗಳನ್ನು ಹೊರತರಲು ನೆರವಾಗಬೇಕು ಮತ್ತು ಮಕ್ಕಳ ಜೀವನ ಉದ್ದೇಶವನ್ನು ಕಂಡು ಹಿಡಿಯುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸಬೇಕು. ಹಲವು ವಿಶೇಷತೆಗಳ ಸ್ವರೂಪವಾಗಿರುವ ಶಿಕ್ಷಕರೇ ನಿಮಗಿದೋ ಶಿಕ್ಷಕ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು..

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here