

ಬಂಟ್ವಾಳ: ಇಂದು ಬಂಟ್ವಾಳ ಜಕ್ರಿಬೆಟ್ಟಿನಲ್ಲಿ ವಿಧಾತ್ರೀ ಕೈಕಂಬ ತಂಡದ “ಬಸ್ ಸ್ಟಾಂಡ್” ನಾಟಕದ ಎರಡನೇ ಪ್ರಯೋಗ..
ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇದರ ಆಶ್ರಯದಲ್ಲಿ ಜರಗುವ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ರಂಗ ಕೇಸರಿ” ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ “ವಿಧಾತ್ರೀ ಕಲಾವಿದೆರ್ ಕೈಕಂಬ” ತಂಡದ ಪ್ರಥಮ ಪ್ರಯೋಗದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಪಡೆದ ಹಾಸ್ಯ ನಾಟಕ “ಬಸ್ ಸ್ಟಾಂಡ್” ಪ್ರದರ್ಶನ ಗೊಳ್ಳಲಿದೆ.







