

ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಶಾಸಕ ಯು.ಟಿ ಖಾದರ್ ಸೋಮವಾರ ಉದ್ಘಾಟಿಸಿದರು. ಸೋಮವಾರ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಗಣೇಶೋತ್ಸವಕ್ಕೆ ಭಾಗಹಿಸಿದ ಅವರು ಹೈಮಾಸ್ಕ್ ದೀಪದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಎಫ್. ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಾಜಿ ತಾಪಂ ಸದಸ್ಯ ಅಸೀಫ್ ಇಕ್ಬಾಲ್, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥ ಕೃಷ್ಣಕುಮಾರ್ ಪುಂಜಾ, ದೇವದಾಸ್ ಶೆಟ್ಟಿ ಕೊಡ್ಮಾನ್, ಬಿ.ಪ್ರಕಾಶ್ ಶೆಟ್ಟಿ ತುಂಬೆ, ಉಮೇಶ್ ಶೆಟ್ಟಿ ಬರ್ಕೆ, ಗ್ರಾಪಂ ಸದಸ್ಯರಾದ ಭಾಸ್ಕರ ರೈ, ಇಕ್ಬಾಲ್ ಸುಜೀರ್, ಮುಹಮ್ಮದ್ ಮೋನು, ಝಾಹೀರ್ ಅಬ್ಬಾಸ್, ರಿಯಾಝ್ ಕುಂಪನಮಜಲು, ಪ್ರಮುಖರಾದ ಸುಕೇಶ್ ಶೆಟ್ಟಿ, ಪದ್ಮನಾಭ ಶೆಟ್ಟಿ ಪುಂಚಮೆ, ತಾರನಾಥ ಶೆಟ್ಟಿ ತೇವು, ಮಜೀದ್ ಪೇರಿಮಾರ್ ಉಪಸ್ಥಿತರಿದ್ದರು.








