ಬಂಟ್ವಾಳ: ಸಂಸ್ಕಾರದ ಜೀವನಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತದೆ. ಧಾರ್ಮಿಕ ಕಾರ್ಯಗಳ ಮೂಲಕ ಮನಸ್ಸುಗಳು ಒಂದಾಗುತ್ತದೆ, ಪ್ರೀತಿ ವಿಶ್ವಾಸ ಹಾಗೂ ಸಂಘಟನೆ ಸಾಧ್ಯ ಎಂದು  ಮಾಜಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ಹೇಳಿದರು.
ಅವರು ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ (ರಿ.) ಶಂಭೂರು ಇವರ ವತಿಯಿಂದ ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ  ನಡೆಯುವ ಒಂದು ದಿನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಸಿ ಮಾತನಾಡಿದರು.
ಬಾಲಗಂಗಾಧರ ತಿಲಕರ ಕನಸು ಕೂಡಾ ಇದೇ ಅಗಿತ್ತು. ಹಿಂದೂ ಧರ್ಮದ ಜನರ ಒಗ್ಗೂಡಿಸಲು ಮನಸ್ಸು ಮಾಡಿದ ಅವರಿಗೆ ಗಣಪತಿ ಆರಾಧನೆ ಸೂಕ್ತ ವೆಂದರಿಯಿತು.
ಸಾಮೂಹಿಕವಾಗಿ ದೇವರಿಗೆ ಸಲ್ಲಿಸುವ ಪೂಜೆಯಿಂದ ಮನಸ್ಸು ಶುದ್ದಿಯಾಗುತ್ತದೆ, ಮನಪರಿವರ್ತನೆ ಅಗುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಅಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಎಂ. ಯುವ ಉದ್ಯಮಿ ನವೀನ್ ಶೆಟ್ಟಿ, ಯಂ. ಪುತ್ತೂರು ಜಿಲ್ಲಾ ವಿಹಿಂಪ ಸಾಮರಸ್ಯ ಪ್ರಮುಖ ಹಾಗೂ ಆರ್ಯುವೇದ ತಜ್ಞರಾದ ರಾಘವೇಂದ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನರಿಕೊಂಬು ಅಂಜನಾದೇವಿ ಮಹಿಳಾ ಮಂಡಲದ ಅಧ್ಯಕ್ಷೆ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಶಂಕರನಾರಾಯಣ ರಾವ್ ನರಿಕೊಂಬು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಾಜಿ ತಾ.ಪಂ.ಉಪಾಧ್ಯಕ್ಷ ಆನಂದ ಶಂಭೂರು ಪ್ರಾಸ್ತಾವಿಕ ವಾಗಿ ಮಾತನಾಡಿ , ಸ್ವಾಗತಿಸಿದರು.
ಸಂತೋಷ ವಂದಿಸಿದರು.
ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here