


ಬಂಟ್ವಾಳ: ನಾಡಿನೆಲ್ಲಡೆ ಗೌರಿ ಗಣೇಶನ ಸಂಭ್ರಮ, ಮನೆಮನೆಗಳಲ್ಲಿ ಗಣಪನ ವಿಗ್ರಹಗಳ ನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಯುತ್ತದೆ.
ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ನಡೆಸಿ ಅದ್ದೂರಿಯಾಗಿ ಪೂಜೆ ನಡೆದರೆ ಶತಮಾನದ ಇತಿಹಾಸವಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಬಯಲು ಗಣಪನಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನಡೆದವು.
ಬಯಲು ಆಲಯದಲ್ಲಿ
ಮುಂಜಾನೆಯಿಂದಲೇ ಸಾಲು ಸಾಲು ಭಕ್ತ ರು ಕ್ಷೇತ್ರಕ್ಕೆ ಆಗಮಿಸಿ ಬಯಲು ಗಣೇಶ ನಿಗೆ ಪೂಜೆ ಸಲ್ಲಿಸಿದರು.
ಮಳೆಯ ನಡುವೆಯೂ ನಿರಂತರವಾಗಿ ಪೂಜೆ ನಡೆಯುತ್ತಲೆ ಇದ್ದವು.
ಇಲ್ಲಿಗೆ ಬರುವ ಭಕ್ತರು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ.





