ಬಂಟ್ವಾಳ :2019 ರ ಸಪ್ಟೆಂಬರ್ ದಿನಾಂಕ 1 ರಿಂದ ಮತದಾರರ ವಿಶೇಷ ಪರಿಷ್ಕರಣೆ
2020 ಕ್ಕೆ ಸಂಬಂದಪಟ್ಟಂತೆ ಬೂತು ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ ದಿನಾಂಕ 01.09.2019 ರಿಂದ 30.09.2019 ರವರೆಗೆ
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹೆಸರು ತೆಗೆದು ಹಾಕುವಿಕೆ ಹಾಗೂ ತಿದ್ದುಪಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಬೂತು ಮಟ್ಟದ ಅಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಲಿರುವ
ಬಗ್ಗೆ ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಮಿನಿವಿಧಾನ
ಸೌದದ ಸಭಾಂಗಣದಲ್ಲಿ
ಇಂದು ಭಾನುವಾರ ಕಂಬಳ ಬೆಟ್ಟು ಭಟ್ರೆನ ಮಗಳು
ತುಳು ಚಲನ ಚಿತ್ರದ ನಾಯಕಿ
ಐಶ್ವರ್ಯ ಆಚಾರ್ಯ ದೀಪ ಬೆಳಗಿಸಿ ಚಾಲನೆ ನೀಡಿದರು. ಮತದಾನ ಎಲ್ಲಾ ಯುವಜನತೆಯ ಕನಸಾಗಬೇಕು, ಧ್ಯೇಯವಾಗಬೇಕು. ನಮ್ಮ ದೇಶವನ್ನು ಬಲಿಷ್ಠವಾಗಿ ನಿರ್ಮಿಸಲು ಯುವ ಜನತೆ ಮತದಾರರಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂಟ್ವಾಳ ತಹಶೀಲ್ದಾರ್
ರಶ್ಮಿ ಎಸ್ ಆರ್ ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು, ಬೂತು ಮಟ್ಟದ ಅಧಿಕಾರಿಗಳು, ಇತರ ಎಲ್ಲಾ ಸಿಬ್ಬಂದಿಗಳು ಬಿಸಿಲು ಮಳೆಗಳನ್ನು ಲೆಕ್ಕಿಸದೆ ದಿನಪೂರ್ತಿ ದುಡಿಯುವುದರಿಂದ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದಲ್ಲಿ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಿದೆ.
ಮತದಾರರ ಪರಿಷ್ಕರಣೆಯ ಸದುಪಯೋಗವನ್ನು ಎಲ್ಲಾರು ಪಡೆದುಕೊಳ್ಳಬೇಕು.
ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಚುನಾವಣಾ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ,
ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಕುಮಾರ್ ಪಕ್ಕಳ,
ಚುನಾವಣಾ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್,
ಆಹಾರ ಶಾಖೆಯ ಶ್ರೀನಿವಾಸ್,
ಬಂಟ್ವಾಳ ಉಪನೋಂದಣಾಧಿಕಾರಿ ಕವಿತ,
ಬಂಟ್ವಾಳ ತಾಲೂಕು ಪಂಚಾಯತ್ ನ ವ್ಯವಸ್ಥಾಪಕರಾದ ಶಾಂಭವಿ ಎಸ್ ರಾವ್ ,
ಕ್ಷೇತ್ರ ಸಮನ್ವಯ ಆಧಿಕಾರಿ
ರಾಧಾಕೃಷ್ಣ,
ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು
ತಾಲೂಕು ಮಟ್ಟದ ಅಧಿಕಾರಿಗಳು,
ತಾಲೂಕು ಕಚೇರಿಯ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು,
ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ
ಹಾಜರಿದ್ದರು.
ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here