



ಬಂಟ್ವಾಳ: ಇತಿಹಾಸ ಪ್ರಸಿದ್ದ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಇಂದಿನಿಂದ ಶುರು. ಸುಳ್ಳಮಲೆ ಗುಹಾ ತೀರ್ಥ ಸ್ನಾನದ ಆರಂಭಿಕ ಹಂತದಲ್ಲಿ ಅಲ್ಲಿ ನೆಲೆಯಾಗಿರುವ ದೈವಗಳಿಗೆ ಸೇವೆ ಸಲ್ಲಿಸಲಾಗುತ್ತದೆ.
ಇಂದು ಅಗಸ್ಟ್ 30 ರ ಬೆಳಿಗ್ಗೆ ಸೋಣ ಅಮಾವಾಸ್ಯೆಯಂದು ಅರಸು ಮತ್ತು ಪ್ರಧಾನ ದೈವಗಳಿಗೆ ತಂಬಿಲ ನಡೆದು ಒಳಗೆ ಇಳಿಯಲು ಕೆರ್ಪು ಇಟ್ಟ ನಂತರ ಸೆಪ್ಟೆಂಬರ್ 2 ರಂದು ಭಾದ್ರಪದ ಚೌತಿವರೆಗೆ ತೀರ್ಥ ಸ್ನಾನ ನಡೆಯುವುದು.
ಚೌತಿಯ ದಿನದಂದು ಊರಪರ ಊರಿನ ಭಕ್ತರು ಮುಂಜಾನೆ ಯಿಂದಲೇ ಭಯಭಕ್ತಿಯಿಂದ ಗುಹಾ ತೀರ್ಥ ಸ್ನಾನ ಮಾಡಿ ತೆರಳುವರು.
ಇಲ್ಲಿ ನ ವಿಶೇಷ ವೆಂದರೆ ಸೋಣ ತಿಂಗಳ ಸೋಣ ಅಮವಾಸ್ಯೆ ಯಿಂದ ಚೌತಿವರೆಗೆ ನಾಲ್ಕು ದಿನ ಮಾತ್ರ ಗುಹಾ ತೀರ್ಥ ಸ್ನಾನ ಕ್ಕೆ ಅವಕಾಶ ಇರುವುದು.
ಉಳಿದಂತೆ ವರ್ಷದ ಯಾವ ದಿನವೂ ಗುಹಾ ತೀರ್ಥ ಸ್ನಾನ ಕ್ಕೆ ತೆರಳುವಂತಿಲ್ಲ. ದೇವರ ನಾಮ ಸ್ಮರಣೆ ಮಾಡುತ್ತಾ ಗುಹೆಯಲ್ಲಿ ಭಕ್ತರು ಸಾಲುಸಾಲಾಗಿ ಸಾಗಿ ತೀರ್ಥ ಸ್ನಾನ ಮಾಡಿ ಬರುತ್ತಾರೆ. ಭಕ್ತರ ಬಯಕೆ ಈಡೇರುವುದರಿಂದ ಪ್ರತಿವರ್ಷವೂ ಇಲ್ಲಿಗೆ ಭಕ್ತರ ಜನಸಂಖ್ಯೆ ಹೆಚ್ಚಾಗುತ್ತಲೆ ಇದೆ.





