

ಬಿ.ಸಿ.ರೋಡ್ : ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮತ್ತು ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಹಯೋಗದೊಂದಿಗೆ ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದ ಬಳಿ ಇರುವ ಗದ್ದೆಯಲ್ಲಿ ಸೆ. 1ರಂದು ಕೆಸರ್ ಕಂಡೊಡ್ ಕುಸೇಲ್ದ ಗೊಬ್ಬು-ಎಸಲ್ 3 ಎಂಬ ಕುಲಾಲ ಬಾಂಧವರಿಗಾಗಿ ಕೆಸರ್ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಕೊರಗಪ್ಪ ಮೂಲ್ಯ ಉದ್ಘಾಟಿಸಲಿದ್ದಾರೆ. ಯುವವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್, ಉದ್ಯಮಿ ರಾಮ ಉಪ್ಪಿನಂಗಡಿ, ಕುಂಬಾರ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಪೆರುವಾಯಿ, ಉದ್ಯಮಿ ಕೃಷ್ಣಪ್ಪ ಬಿ., ಗೋಪಾಲ ನೆಲ್ಲಿ ಶಂಭುಗ, ದಿನೇಶ್ ಪಿ.ವಿ., ಚಂಚಲಾಕ್ಷಿಸುಕುಮಾರ್, ಜಯಂತಿ ಗಂಗಾಧರ, ಭಾರತಿಶೇಷಪ್ಪರವರು ಮುಖ್ಯ ಆತಿಥಿಗಳಾಗಿ ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹೊನ್ನಯ್ಯ ಕಾಟಿಪಳ್ಳ, ವಸಂತ ಕುಮಾರ್, ದಿವಾಕರ ಮಯ್ಯರಬೈಲು, ವೂವಮ್ಮ ದೈಪಲ ಇವರನ್ನು ಸನ್ಮಾನಿಸಲಾಗುವುದು. ಸಂಜೆ ಸಮಾರೋಪ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಗಣೇಶ್, ಸೋಮಯ್ಯ ಹನೈನೆಡೆ, ಲಕ್ಷ್ಮೀನಾರಾಯಣ ಬಂಟ್ವಾಳ, ಚಂದ್ರಹಾಸ ಪಲ್ಲಿಪಾಡಿ, ಸುರೇಶ್ ಅಲ್ಲಿಪಾದೆ, ಸೇಸಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಕೆಸರುಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ ಎಂದು ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








