ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೇಸರಿ, ಯುವಕ ಮಂಡಲ ಮತ್ತು ವಿಶ್ವ ಹಿಂದೂ ಪರಿಷತ್ ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಇದರ ಆಶ್ರಯದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇದೇ ಬರುವ ಆ.2ರಂದು ಕೇಸರಿ ಯುವಕ ಮಂಡಲ ಅಜಿಲಮೊಗರು ಇಲ್ಲಿ ನಡೆಯಲಿದೆ. ಬೆಳಿಗ್ಗೆ ಗಣಹೋಮ, ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ, ಮಹಾಪೂಜೆ, ಭಜನಾ ಕಾರ್ಯಕ್ರಮ, ಆಟೋಟ ಸ್ವರ್ಧೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯದಲ್ಲಿ ಅಮರನಾಥ ಅಜಿಲ ಅರಿಕಲ್ಲು, ಉದಯ ಕುಮಾರ್ ಅಜಿಲ ಕಟ್ಟೆಮನೆ, ದ.ಕ ಲೋಕಸಭಾ ಸದಸ್ಯರು, ರಾಜ್ಯ ಬಿ.ಜೆ.ಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಕರ್ನಾಟಕದ ಸಚಿವರು, ವಿಧಾನಸಭಾ ಸದಸ್ಯರಾದ ಶ್ರೀನಿವಾಸ ಪೂಜಾರಿ ಕೋಟ, ಮಾನ್ಯ ಶಾಸಕರಾದ ರಾಜೇಶ್ ನ್ಯಾಕ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಮತ್ತು ಹೊಳ್ಳ ಆರ್ಟ್ಸ್ ನ ಶಂಕರ ನಾರಾಯಣ ಹೊಳ್ಳ ಭಾಗವಹಿಸಲಿದ್ದು, ಸಂಜೆ 6.30ಕ್ಕೆ ಶ್ರೀ ವಿನಾಯಕ ಭವ್ಯ ಶೋಭಯಾತ್ರೆಯು ಮೂಲಕ ನೇತ್ರಾವತಿ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here