ಬಂಟ್ವಾಳ: ಪಿಲಾತಬೆಟ್ಟು ಗ್ರಾಮ ಪಂಚಾಯತ್ ಹಾಗೂ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇವರ ಸಹಭಾಗಿತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪಿಲಾತಬೆಟ್ಟು ಗ್ರಾ.ಪಂ.ನ ಸಭಾಂಗಣದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಮೂರು ಶಾಲೆಗಳಿಗೆ ಮೂರ್ಜೆ ಸರಕಾರಿ ಹಿ.ಪ್ರಾಥಮಿಕ ಶಾಲೆ, ಅರಳ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಚಾರ್ಮಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ಬೆಂಚು ಹಾಗೂ ಡೆಸ್ಕ್ ಗಳನ್ನು ವಿತರಿಸಿದರು.

ಸವಲತ್ತುಗಳನ್ನು ವಿತರಿಸಿದ ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು
ಸರಕಾರದ ಜೊತೆಯಲ್ಲಿ ಸಂಘಸಂಸ್ಥೆಗಳು ಸೇರಿಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ.
ಇಂತಹ ಕೆಲಸ ಕಳೆದ ಅನೇಕ ವರ್ಷಗಳಿಂದ ಸ್ವಸ್ತಿಕ ಪ್ರೆಂಡ್ಸ್ ಕ್ಲಬ್ ಮಾಡಿದೆ ಎಂದರು.
ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಉತ್ತಮ ಕಾರ್ಯಗಳ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.
ಎಲ್ಲಾ ಸವಲತ್ತುಗಳನ್ನು ಸರಕಾರವೇ ನೀಡಬೇಕು ಎಂಬ ಯೋಚನೆ ಕಡಿಮೆಯಾಗಿ ಗ್ರಾಮದ ಅಭಿವೃದ್ಧಿ ಯಲ್ಲಿ ಎಲ್ಲರೂ ಕೈಜೋಡಿಸಿ ದಾಗ ದೇಶದ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು.ಕ್ಷೇತ್ರ ಕ್ಕೆ 25 ಕೋಟಿ ರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ.
ಹಂತಹಂತವಾಗಿ ನಿಮ್ಮ ಬೇಡಿಕೆಯನ್ನು ಪೂರೈಸಲು ಶಕ್ತಿ ಮೀರಿ ಮನಸಾಕ್ಷಿಯಾಗಿ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಉದಾಸೀನ ಮಾಡದೆ ಜನರು ನೀಡಿದ ಅವಕಾಶಕ್ಕೆ ಕುಂದುಬಾರದ ರೀತಿಯಲ್ಲಿ ನಿಮ್ಮ ಸೇವೆ ಮಾಡುತ್ತೇನೆ ಎಂಬ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲೂಕು ಪಂಚಾಯತ ಸದಸ್ಯ ರಮೇಶ್ ಕುಡುಮೇರು, ಗ್ರಾ.ಪಂ.ಅಧ್ಯಕ್ಷ ಶೇಖರ್ ಶೆಟ್ಟಿ ಕುಮಂಗಿಲ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್,ಉಪಾಧ್ಯಕ್ಷೆ ಲಕ್ಮೀ ಜೆ.ಬಂಗೇರ, ಸದಸ್ಯ ರಾದ ಲಕ್ಮೀನಾರಾಯಣ ಹೆಗ್ಡೆ, ಯೋಗೇಂದ್ರ, ಸರೋಜ ಡಿ.ಶೆಟ್ಟಿ, ವಸಂತಿ, ಸೀತಾ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ವಾಮದಪದವು ಸೇವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಮುಖ್ಯಕಾರ್ಯನಿರ್ವಣಾಧಿಕಾರಿ ಮಂಜಪ್ಪ ಮೂಲ್ಯ, ಪಿಡಿಒ ರಾಜಶೇಖರ್ ರೈ, ಕಂದಾಯ ನಿರೀಕ್ಷಕ ನವೀನ್, ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಮತ್ತಿರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪೀಠೋಪಕರಣ ಕ್ಕೆ ಧನಸಹಾಯ ನೀಡಿದ ಹನುಮಂತ ಹಳ್ಳಿಗೇರಿ, ಹಮೀದ್ ದುಗ್ಗಮರಗುಡ್ಡೆ ಅವರನ್ನು ಅಭಿದಿನಂದಿಸಲಾಯಿತು.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕ ರು ಶಾಸಕ ರಿಗೆ ಮನವಿ ನೀಡಿದರು.
ಮೂರ್ಜೆ ರಿಕ್ಷಾ ಪಾರ್ಕ್ ಗೆ ಸಿಮೆಂಟ್ ಸೀಟು ಹಾಕುವಂತೆ, ಮಂಚಗುಡ್ಡೆ , ದುಗ್ಗಮರ ಗುಡ್ಡೆ ಈ ಪ್ರದೇಶದಲ್ಲಿ ಬೋರ್ ವೆಲ್ ಮತ್ತು ನೀರಿನ ಟ್ಯಾಂಕ್ ನಿರ್ಮಾಣ, ಮೂರ್ಜೆ- ಕೊಳಕೆಬೈಲು ರಸ್ತೆ ಅಭಿವೃದ್ಧಿಗೆ ಮನವಿ ಮಾಡಲಾಯಿತು.
ಪಿ.ಎಂ.ಪ್ರಭಾಕರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಪಿ.ಡಿ.ಒ. ರಾಜಶೇಖರ ರೈ ಸ್ವಾಗತಿಸಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here