ಉಜಿರೆ: ಸಮಾಜದಲ್ಲಿಅವಶ್ಯಕತೆಇದ್ದವರಿಗೆ ಬೇಕಾದಉಪಯುಕ್ತ ವಸ್ತುಗಳನ್ನು ಸಂಗ್ರಹಿಸಲು ಹಾಗೂ ಅಗತ್ಯವಿದ್ದವರುಅದನ್ನು ಪಡೆಯಲು ಅನುಕೂಲವಾದ ದಿ ವಾಲ್‌ಆಫ್‌ಗುಡ್‌ವಿಲ್ ಘಟಕವನ್ನು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ.ಕಾಲೇಜಿನಲ್ಲಿ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು.

ದಾನ ನೀಡುವುದು ಪವಿತ್ರವಾದ ಪುಣ್ಯದಕಾಯಕವಾಗಿದ್ದುಯಾವುದೇರೀತಿಯ ಅಹಂ ಇಲ್ಲದೆದಾನ ನೀಡಬೇಕು. ಆಗ ದಾನ ಪಡೆದವರಲ್ಲಿಯೂದೈನ್ಯತೆ ಬರುವುದಿಲ್ಲ. ದೇವರು ನಮಗೆ ಕಣ್ಣಿಗೆಕಾಣದ ಹಾಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾರೆಎಂದುಅವರು ಹೇಳಿದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಡಾ. ಬಿ. ಯಶೋವರ್ಮ ಶುಭಾಶಂಸನೆ ಮಾಡಿದರು.
ಸೋನಿಯಾವರ್ಮ, ಪ್ರಿಯದರ್ಶಿನಿ, ಶ್ರುತಜಿತೇಶ್, ಪೂರಣ್‌ವರ್ಮ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಸೋಮಶೇಖರ ಶೆಟ್ಟಿ, ರೋಟರಿಕ್ಲಬ್‌ಅಧ್ಯಕ್ಷಜಯರಾಮ್, ಸುನೀಲ್ ಶೆಣೈ ಮತ್ತುಶ್ರೀಧರ ಕೆ.ವಿ. ಉಪಸ್ಥಿತರಿದ್ದರು.

ಧರ್ಮಸ್ಥಳ ನೌಕರರಿಂದ ಕರಸೇವೆ: 

ಉಜಿರೆ :ಧರ್ಮಸ್ಥಳ ದೇವಸ್ಥಾನದ ನೌಕರ ವೃಂದದವರುಎರಡು ದಿನ ಮಲವಂತಿಗೆ ಮತ್ತುಚಾರ್ಮಾಡಿಗ್ರಾಮದಲ್ಲಿಕರಸೇವೆ ಮಾಡಿ ನೆರೆ ಸಂತ್ರಸ್ತರಿಗೆ ಸಹಕಾರ ನೀಡಿದರು.


ಎರಡು ದಿನಗಳಲ್ಲಿ ಇನ್ನೂರು ಮಂದಿ ನೌಕರರುಕರಸೇವೆ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಕರಸೇವೆಗೆ ಸಂತ್ರಸ್ತರು ಧನ್ಯತೆಯಿಂದ ಕೃತಜ್ಞತೆ ಸಲ್ಲಿಸಿದರು.

 


ನೆರೆ ಸಂತ್ರಸ್ತರಿಗೆ ವಿತರಿಸಲು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಸೀರೆಗಳನ್ನು ವಿತರಿಸಲುಸಜ್ಜುಗೊಳಿಸುತ್ತಿರುವುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here