ಪಾಂಗಲ್ಪಾಡಿ: ಮೊಸರು ಕುಡಿಕೆ ಉತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಪಾಂಗಲ್ಪಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸರ್ಧೆಗಳು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಜರಗಿತು.
ಶಿಕ್ಷಕಿ ವಸಂತಿ ಜಿ.ಪುರಾಣಿಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವೀಯ ಮೌಲ್ಯದ ಕೊಂಡಿ ಕೃಷ್ಣ ತತ್ವದಲ್ಲಿದ್ದು ಅದುವೇ ಜೀವನ ತತ್ವವೂ ಆಗಬೇಕಾಗಿದೆ.ಯುವ ಜನಾಂಗ ಕೃಷ್ಣ ತತ್ವದ ಉತ್ತಮ ವಿಚಾರವನ್ನು ಅಧ್ಯಯನ ಮಾಡಿ ತಪ್ಪು ನಡೆಯಲ್ಲಿ ನಡೆಯದೆ ಸುಸಂಸ್ಕೃತ ಸಮಾಜ ಕಟ್ಟಲು ಮುಂದಾಗಬೇಕು.ಉತ್ಸವ ,ಆಚರಣೆಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ಹೇಳಿದರು.


ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮಿ ನಾರಾಯಣ ಉಡುಪ, ಉದ್ಯಮಿ ಗೋಪಾಲಕೃಷ್ಣ ಪೂಜಾರಿ, ಎಂ.ಪಿ.ಶೇಖರ ಪೆತ್ತರ, ಸಮಿತಿ ಪದಾಽಕಾರಿಗಳಾದ ಡಾ| ರಾಮಕೃಷ್ಣ ಎಸ್., ಪ್ರಶಾಂತ್ ಕೋಟ್ಯಾನ್ ಮೇಗಿನಮನೆ, ಸತೀಶ್ ಕರ್ಕೇರ ಕಯ್ಯಬೆ,ರಂಜಿತ್ ಅರ್ಕೆದೊಟ್ಟು, ವೀರೇಂದ್ರ ಕುಂಟಾಲಪಲ್ಕೆ, ಪ್ರಶಾಂತ್ ದೋಟ,ಉಮೇಶ್ ಆಚಾರ್ಯ ಕಯ್ಯಬೆ, ಸುಂದರ್ ಸಪಲ್ಯ,ಚಂದ್ರಶೇಖರ ಆಚಾರ್ಯ ಹಲೆಪ್ಪಾಡಿ,ಗಂಗಯ್ಯ.ಡಿ.ಎನ್., ಸಂತೋಷ್ ದೋಟ, ಬೇಬಿ ಶೆಟ್ಟಿ ಮಠ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಅರ್ಕೆದೊಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ಎಸ್. ಎರ್ಮೆನಾಡು ವಂದಿಸಿದರು. ಬೂಬ ಕುದ್ಕಂದೋಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ನಿಧಿ ಹುಡುಕುವುದು, ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸರ್ಧೆ, ಮಕ್ಕಳಿಗೆ ವಿವಿಧ ಆಟೋಟ ಸರ್ಧೆ ನಡೆಯಿತು.
ಸಂಜೆ ನಡೆದ ಸಮಾರೋಪದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಉದ್ಯಮಿ ಟಿ.ವರದರಾಜ ಪೈ, ಪತ್ರಕರ್ತ ಗೋಪಾಲ ಅಂಚನ್, ವಾಮದಪದವು ವ್ಯ.ಸೇ.ಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರರು ಭಾಗವಹಿಸಿದ್ದರು.

ಮಾವಿನಕಟ್ಟೆ: ಮೊಸರು ಕುಡಿಕೆ ಉತ್ಸವ
ಬಂಟ್ವಾಳ: ಬಂಟ್ವಾಳ ತಾ| ವಾಮದಪದವು, ಮಾವಿನಕಟ್ಟೆ ಗೆಳೆಯರ ಬಳಗ ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 26ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಕ್ರೀಡೆಗಳು ಶುಕ್ರವಾರ ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಜರಗಿತು.


ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮ ರಕ್ಷಣೆಗಾಗಿ ಅವತಾರವೆತ್ತಿದ್ದ ಶ್ರೀ ಕೃಷ್ಣನ ದಿವ್ಯ ಸಂದೇಶಗಳು ಸಾರ್ವಕಾಲಿಕವಾಗಿದ್ದು, ನಮ್ಮಲ್ಲಿ ದೈವೀ ಪ್ರಜ್ಞೆ ಮೂಡಿಸುವುದರೊಂದಿಗೆ ಅಜ್ಞಾನವನ್ನು ನಿವಾರಿಸಿ ಪ್ರತಿಯೊಬ್ಬರೂ ಕರ್ತವ್ಯಮುಖರಾಗಬೇಕು ಎನ್ನುವ ಅರಿವು ಉಂಟು ಮಾಡುತ್ತದೆ ಎಂದು ಹೇಳಿದರು.
ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಶೀನ ಶೆಟ್ಟಿ ಕಂರ್ದಬೆಟ್ಟು, ರೋಹಿಣಿ ಶಿವರಾಂ ಪೂಜಾರಿ, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ, ಸಮಿತಿ ಗೌರವಾಧ್ಯಕ್ಷ ರಘುರಾಮ ಶೆಟ್ಟಿ, ಹೇಮಾವತಿ ಚೆನ್ನಪ್ಪ ಶೆಟ್ಟಿ, ಶೇಖರ ಶೆಟ್ಟಿ ಕುತ್ಲೋಡಿ, ಸುರೇಶ್ ಶೆಟ್ಟಿ ಕುತ್ಲೋಡಿ, ಸುರೇಶ್ ಶೆಟ್ಟಿ ಮಾವಿನಕಟ್ಟೆ, ದೇವಿಪ್ರಸಾದ್ ಶೆಟ್ಟಿ, ನಾಗೇಶ್ ಎಂ.ಮಾವಿನಕಟ್ಟೆ, ದಿವಾಕರ ಪೂಜಾರಿ, ಜಯರಾಮ ಶೆಟ್ಟಿ, ವಸಂತ ಶೆಟ್ಟಿ, ಭೂಷಣ್ ಶೆಟ್ಟಿ, ಸುರೇಖಾ, ಲಕ್ಷ್ಮೀ ಶೆಟ್ಟಿ, ಕುಸುಮಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here