ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಮಂದಿರದ 87 ನೇ ವರ್ಷದ ಮೊಸರುಕುಡಿಕೆ ಉತ್ಸವ ಅದ್ದೂರಿ ಮೆರವಣಿಗೆಯ ಮೂಲಕ ಸೇರಿದ ಜನರ ಮನಸ್ಸು ರಂಜಿಸಿತು.

ಶನಿವಾರ ಮದ್ಯಾಹ್ನ 3.30.ರಿಂದ ಶ್ರೀ ಕೃಷ್ಣ ದೇವರ ಶೋಭಾಯಾತ್ರೆಯ ಆರಂಭಿಕ ಹಂತದಲ್ಲಿ ಪುಟಾಣಿಗಳು ಶ್ರೀ ರಾಮ ಭಜನಾಮಂದಿರದ ಮುಂಭಾಗದಲ್ಲಿ ಮಡಿಕೆ ಹೊಡೆಯುವ ಮೂಲಕ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಉಪಸ್ಥಿತಿಯಲ್ಲಿ ಮೊಸರು ಕುಡಿಕೆ ಉತ್ಸವದ ಮೆರವಣಿಗೆ ನಡೆಯಿತು.

ಶೋಭಾಯಾತ್ರೆಯ ಮೆರವಣಿಗೆಯ ಉದ್ದಕ್ಕೂ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಮಕ್ಕಳ ಕೃಷ್ಣನ ವೇಷ, ವಿವಿಧ ಆಕರ್ಷಕ ಟ್ಯಾಬ್ಲೋಗಳು, ಭಜನಾ ತಂಡ,ತಾಲೀಮು ತಂಡ, ಗೊಂಬೆಕುಣಿತ, ಚೆಂಡೆ, ನಾಸಿಕ್ ಬ್ಯಾಂಡ್ ಗಳು ಸಾಥ್ ನೀಡಿತು.
ಮೆರವಣಿಗೆಯ ಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಮಾಜಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಬಿಜೆಪಿ ಯುವಮೋರ್ಚಾ ಆಧ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರಮುಖರಾದ ನಾರಾಯಣ ಸೋಮಾಯಾಜಿ, ಮೋನಪ್ಪ ದೇವಸ್ಯ, ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಯತಿನ್ ಪೂಜಾರಿ ಕಲ್ಲಡ್ಕ, ಚಿತ್ತರಂಜನ್, ಶೇಖರ್ ಕೊಟ್ಟಾರಿ, ಮತ್ತಿತರ ರು ಉಪಸ್ಥಿತಿ ರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here