ಬಂಟ್ವಾಳ: ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಗಿರೀಶ್ ತೆಲ್ಲಾರ್ ಅವರ ನೇತ್ರತ್ವದಲ್ಲಿ ಬಂಟ್ವಾಳ ದ ಪ್ರವಾಹ ನಿರಾಶ್ರಿತರಿಗೆ ನೀಡಿದ ಕಿಟ್ ಗಳನ್ನು ಬಂಟರ ಸಂಘ ಕಲ್ಲಡ್ಕ ವಲಯದ ಮೂಲಕ ಬಿಸಿರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ವಿತರಿಸಲಾಯಿತು.

ಬಳಿಕ ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ರೈ ಅವರು ಮಾತನಾಡಿ
ಪ್ರವಾಹ ಅಥವಾ ಇನ್ನಿತರ ಕಷ್ಟಕಾಲದ ಸಂಧರ್ಭದಲ್ಲಿ
ಸ್ಪಂದಿಸುವ ಗುಣ ಭರವಸೆಯ ಮಾತುಗಳು ಬಹಳ ಮುಖ್ಯ. ಮೌಲ್ಯದ ಬಗ್ಗೆ ಚಿಂತನೆ ಮಾಡುವುದು ಬೇಡ ಎಂದು ಅವರು ಹೇಳಿದರು.
ಕಷ್ಟದ ಸಮಯದಲ್ಲಿ ಮುಂದೆಯೂ ನಿಮ್ಮ ಜೊತೆ ಸದಾ ಇರುತ್ತೇವೆ, ಸರಕಾರದ ಜೊತೆ ಸಂಘಸಂಸ್ಥೆಗಳು ನೀಡುವ ಸವಲತ್ತುಗಳನ್ನು ಪಡೆಯಲು ವಿನಂತಿಸಿದರು.
ನೆರೆ ಸಂತ್ರಸ್ತರಿಗೆ ಕಿಟ್ ಗಳನ್ನು ಒದಗಿಸಿ ಮಾನವೀಯತೆ ಮೆರೆದ ಬಂಟರ ಸಂಘ ಮೀರಾ ಬ್ರದರ್ಸ್ ಮುಂಬಯಿ ಇದರ ಗಿರೀಶ್ ತಲ್ಲಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ವರ್ತಕರ ಸಹಕಾರ ಸಂಘದ ಅದ್ಯಕ್ಷ ಸುಭಾಶ್ಚಂದ್ರ ಜೈನ್, ಅಮ್ಟೂರು ಗ್ರಾಮ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನರಿಕೊಂಬು ಗ್ರಾಮ ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ರಾಮಣ್ಣ ಶೆಟ್ಟಿ ಬಾಳ್ತಿಲ, ಕಬಡ್ಡಿ ಆಟಗಾರ ನಿತಿನ್ ಶೆಟ್ಟಿ,ಬಾಲಕೃಷ್ಣ ಆಳ್ವ ಪಾಣೆಮಂಗಳೂರು, ಕಾರ್ನಾಡ್ ಅಪತ್ಬಾಂದವ ಆಶ್ರಮದ ವ್ಯವಸ್ಥಾಪಕ ಆಸೀಪ್ ಪಡುಬಿದ್ರೆ, ಯುವ ಬಂಟರ ಸಂಘ ಕಲ್ಲಡ್ಕ ವಲಯದ ಅಧ್ಯಕ್ಷ ಸಂತೋಷ್ ಶೆಟ್ಟಿ ಸೀನಾಜೆ, ಕಲ್ಲಡ್ಕ ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು , ಸಂದೀಪ್ ಅರೆಬೆಟ್ಟು, ಉದಯ ರೈ ಸೂರಿಕುಮೇರು, ನಿಶಾಂತ್ ರೈ ನಡ್ಚಾಲ್ , ವಿಖ್ಯಾತ ಶೆಟ್ಟಿ ಅಮ್ಟೂರು, ವಿಕಾಶ ಶೆಟ್ಟಿ ಗೋಳ್ತಮಜಲು, ಗಣೇಶ್ ರೈ ಅಮ್ಟೂರು, ಚಂದ್ರ ರೈ ವೀರಕಂಬ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here