ಇತ್ತೀಚೆಗೆ ನೆರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ದಿನಪಯೋಗಿ ಪರಿಕರಗಳನ್ನು ವಿತರಿಸುವುದರ ಮೂಲಕ ಗ್ರಾಮಸ್ಥರ ನೋವಿಗೆ ಸ್ಪಂಧಿಸಿದ್ದಾರೆ ಮಹರಾಷ್ಟ್ರದ ಕನ್ನಡಿಗರ ಪತ್ರಕರ್ತರ ಸಂಘ. ನೆರೆಸಂತ್ರಸ್ತರಿಗೆ ನೇರವಾಗಿ ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶದಿಂದ ಪಾತ್ರೆ, ದಿನಸಿ, ಚಹಾ ಹುಡಿ, ಸಕ್ಕರೆ, ಅಕ್ಕಿ, ಗೋಧಿ, ಔಷಧಿ, ಬ್ರಾಂಡ್ ನ್ಯೂ ಬಟ್ಟೆಬರೆ, ಬೈರಸ್, ಚಾಪೆ, ಬ್ಲ್ಯಾಂಕೆಟ್, ಬೆಡ್ ಶೀಟುಗಳನ್ನು ಹೊತ್ತು ಹಲವಾರು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕಗ್ಗತ್ತಲನ್ನೂ ಕಾಣದೆ ರಾತ್ರಿ ವೇಳೆಗೂ ಮನೆಮನೆ ಭೇಟಿಗೈದು ಅವುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಕನ್ನಡಿಗರ ಪತ್ರಕರ್ತರ ಸಂಘ, ಮಹರಾಷ್ಟ್ರದ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಮಾರ್ಗದರ್ಶನದಲ್ಲಿ, ಪತ್ರಕರ್ತರಾದ ಆರೀಫ್ ಕಲ್ಕಟ್ಟ ನೇತೃತ್ವದಲ್ಲಿ ಶಿಕ್ಷಕ ವಿಠಲ ಅಬುರ, ಮೋಹನ್ ಕುತ್ತಾರು (ಪ್ರಜಾವಾಣಿ), ವಸಂತ ಕೋಣಾಜೆ (ಉದಯವಾಣಿ) ಅಶ್ವಿನ್ ಕುತ್ತಾರು (ಮುಕ್ತ ಟಿವಿ), ಕೀರ್ತನ್ ದೇವಾಡಿಗ ಮರೋಲಿ (ವಾಯ್ಸ್ ಆಫ್ ಕರಾವಳಿ.ಕಾಂ) ಸೇರಿದಂತೆ ಸ್ಥಳೀಯ ಹಲವಾರು ಸಮಾಜ ಸೇವಕರು, ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ ಉಪ್ಪಿನಂಗಡಿ, ಬೆಳ್ತಂಗಡಿ, ಚಾರ್ಮಾಡಿಗಳ ಕುಗ್ರಾಮಗಳಿಗೆ ಭೇಟಿ ನೀಡಿ ಮೂರು ದಿನ ಅಲ್ಲಿನ ತೀರಾ ಸಂತ್ರಸ್ತರಿರುವ ಕುಗ್ರಾಮಗಳ ಮನೆಮನೆಗಳಿಗೆ ತೆರಳಿ ನಿಜಾರ್ಥದ ಸೇವೆಗೆ ಪತ್ರಕರ್ತರ ಈ ಬಳಗ ಪಾತ್ರವಾಗಿದೆ. ಸೇವೆಗೆ ಕಾರಣಕರ್ತ ಸರ್ವರಿಗೂ ಗ್ರಾಮಸ್ಥರು ಅನಂತಾನಂತ ಕೃತಜ್ಞತೆಯನ್ನು ಸಲ್ಲಿದ್ದಾರೆ. ಮುಂಬಯಿನ ಎಲ್ಲಾ ತುಳುಕನ್ನಡಿಗರಿಗೆ, ವಿಶೇಷವಾಗಿ ತ್ಯಾಗಗೈದು ಸೇವೆಯಲ್ಲಿ ತೊಡಗಿಸಿ ಕೊಂಡ ತಾರಾ ಆರ್. ಬಂಟ್ವಾಳ್ ಪರಿವಾರಕ್ಕೆ ಮತ್ತು ಸರ್ವರಿಗೂ ಶ್ರೀ ಹರಿಯ ಕೃಪೆ ಹರಸಿದ್ದಾರೆ.

🖊ಜನಾರ್ದನ ಕಾನರ್ಪ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here