


ವಿಟ್ಲ: ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಜೆಸಿಐ ವಿಟ್ಲ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ನೀಡುವ ಈಜು ತರಬೇತಿ ಕಾರ್ಯಾಗಾರ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯಲ್ಲಿ ಮಂಗಳವಾರ ಚಾಲನೆಗೊಂಡಿತು. ಈ ತರಬೇತಿಗೆ ರಾಷ್ಟ್ರೀಯ ಮಟ್ಟದ ಈಜು ಪಟು ತರಬೇತುದಾರ ಈಶ್ವರ ಭಟ್ ಚಾಲನೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ, ಕಾರ್ಯದರ್ಶಿ ಅಣ್ಣಪ್ಪ ಸಾಸ್ತಾನ, ಇತರ ಸದಸ್ಯರು, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ರೈ, ಇತರ ಸದಸ್ಯರು, ಜೆಸಿಐ ಘಟಕದ ಅಧ್ಯಕ್ಷ ಬಾಲಕೃಷ್ಣ ವಿಟ್ಲ, ಇತರ ಸದಸ್ಯರು, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ತರಬೇತುದಾರ ಬಾಬು ಕೆ.ವಿ ಉಪಸ್ಥಿತರಿದ್ದರು.







