


ಬಂಟ್ವಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಪ್ರೊ. ಸುಬ್ಬಪ್ಪ ಕೈಕಂಬ, ಪ್ರಾಂಶುಪಾಲರು, ಸ.ಪ್ರ.ದ. ಕಾಲೇಜು, ಉಪ್ಪಿನಂಗಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದು, ಸದ್ಭಾವನೆ ನಮ್ಮಲ್ಲಿ ಅಂತರ್ಗತವಾಗಬೇಕು. ಸದ್ಭಾವನೆಯಿಂದ ಸ್ವಾಸ್ಥ ಸಮಾಜ ಸಾಧ್ಯ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ಆರೋಗ್ಯವಂತ, ಶಾಂತಿಯುತ, ಸುಭದ್ರ ದೇಶ ನಿರ್ಮಾಣ ಸಾಧ್ಯ ಎಂದರು.
ಅತಿಥಿಗಳಾದ ಪ್ರೊ. ವಿ.ಜಿ. ಭಟ್ ಮಾತನಾಡಿ ಸದ್ಭಾವನೆ ಹೃದಯದ ಭಾಷೆ, ಈ ಭಾವನೆಯಿಂದ ಜಾತಿ, ಮತ, ಭಾಷೆ ಎಲ್ಲಾ ಭೇದ ಭಾವಗಳನ್ನುತೊಡೆದು ಸುಂದರ ಸಮಾಜ ಸಾಧ್ಯ ಎಂದರು.
ಪ್ರೊ. ರೋನಾಲ್ಡ್ ಪ್ರವೀಣ್ ಕೊರೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಇವರು ’ಯುವ ಮನಸುಗಳು ಶುದ್ಧ, ನಿಷ್ಕಳಂಕ ರೀತಿಯಲ್ಲಿ ಆಯೋಚಿಸಿ ನಡೆದುಕೊಂಡಾಗ ಸುಖಿ ಸಮಾಜ ಸಾಧ್ಯ’ ಎಂದರು. ಪ್ರೊ. ಕೃಷ್ಣಮೂರ್ತಿ ಎನ್.ಬಿ. ಪ್ರಾಸ್ತಾವಿಕವಾಗಿ ಮಾತಾನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.





