



ಬಂಟ್ವಾಳ : ಜಲಿಯನ್ ವಾಲಾಬಾಗ್ನಲ್ಲಿ ಬೈಸಾಕಿ ಕಾರ್ಯಕ್ರಮಕ್ಕೆ ಸೇರಿದ್ದ 2500 ಜನರಲ್ಲಿ ಸಾಮಾನ್ಯರ, ಮಹಿಳೆಯರ, ಮಕ್ಕಳ ಮತ್ತು ಅಮಾಯಕರ ಮೇಲೆ ಜನರಲ್ ಡಯರ್ ನಡೆಸಿದ ಏಕಾಏಕಿ ಗುಂಡಿನ ದಾಳಿಯು ಅಕ್ಷರಶಃ ನರಮೇಧ. ಈ ದುರಂತದ ನಂತರ ಸ್ವಾತಂತ್ರ್ಯದ ದಿಕ್ಕು ಬದಲಾಗಿ ಉಧಾಮ್ ಸಿಂಗ್, ಭಗತ್ ಸಿಂಗ್ ಮುಂತಾದ ಅಸಂಖ್ಯಾತ ಕ್ರಾಂತಿಕಾರಿಗಳ ಉಗಮಕ್ಕೆ ಕಾರಣವಾಯಿತು. ಈ ಹತ್ಯಾಕಾಂಡವು ಒಂದು ಬ್ರಿಟೀಷರ ಅಮಾನವೀಯ ಕೃತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಭೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ ಇವರು ನುಡಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ಮಾನವಿಕ ಸಂಘದಿಂದ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಶತಮಾನೋತ್ತರದ ನೆನಪು ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು. ಮತ್ತು ಹಿರಿಯರಾದ ಕಮಲಾ ಪ್ರಭಾಕರ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯನಾರಾಯಣ ಕಶೆಕೋಡಿ, ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ಕಟ್ಟೆ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದುರ್ಗಾಶ್ರೀ ದ್ವಿತೀಯ ಬಿ.ಎ ಸ್ವಾಗತಿಸಿ, ಶೀಬಾ ಅಂತಿಮ ಬಿ.ಎ ವಂದಿಸಿ, ನಿಖಿತಾ ಅಂತಿಮ ಬಿ.ಎ ಇವರು ನಿರೂಪಿಸಿದರು.





