

ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದನಡಿ ಕೊಯಿಲ ಇದರ ವತಿಯಿಂದ ಪರಿಸರ ಸಂರಕ್ಷಣೆ ನಮ್ಮಲ್ಲೆರ ಹೊಣೆ ಎನ್ನುವ ಸಂಕಲ್ಪದಡಿ ಕೊಯಿಲ ಗ್ರಾಮದ ಕೈತ್ರೋಡಿ ಕ್ವಾಟ್ರಸ್ ನ ರುದ್ರಭೂಮಿಯಲ್ಲಿ ಸ್ವಚ್ಚತಾ ಅಭಿಯಾನ ಹಾಗೂ ಗಿಡನೆಡುವ ಕಾರ್ಯಕ್ರಮ ನಡೆಯಿತು. ಕೊರಗಜ್ಜ ಕ್ಷೇತ್ರದ ಮೋಕ್ತೇಸರ ಲೋಕೆಶ್ ಕೈತ್ರೋಡಿ ಉದ್ಘಾಟಿಸಿದರು. ಭಜನಾ ಮಂಡಳಿ ಸಂಸ್ಥಾಪಕ ರವೀಂದ್ರ ಪೂಜಾರಿ ಬದನಡಿ, ಅಧ್ಯಕ್ಷ ದಿನೇಶ್ ಸುವರ್ಣ ರಾಯಿ,ಮಹಿಳಾ ಅಧ್ಯಕ್ಷೆ ಶ್ರೀಮತಿ ಆಶಾ, ಕಾರ್ಯದರ್ಶಿ ರಕ್ಷಿತ್ ಅಂತರ ಹಾಗೂ ಭಜನಾ ಮಂಡಳಿಯ 80ಸದಸ್ಯರು ಉಪಸ್ಥಿತರಿದ್ದರು. ರುದ್ರಭೂಮಿಯ 0.60 ಎಕರೆ ಭೂಮಿಯಲ್ಲಿ ಫಲನೀಡುವ ಹಲಸು, ಗೇರು, ಸಫೋಟ, ಬಾದಾಮಿ, ರಾಂಬೂಟನ್, ಸಾಗುವನಿ ಈಗೆ 85 ಗಿಡಗಳನ್ನು ನೆಟ್ಟು ಪ್ರಕೃತಿ ಹಾಗೂ ಪಕ್ಷಿಸಂಕುಲದ ಉಳಿವಿಗಾಗಿ ಸಂಕಲ್ಪತೊಡಲಾಯಿತು.








