ಬಂಟ್ವಾಳ: ಪ್ರತಿಭೆಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂಅಡಕವಾಗಿರುತ್ತದೆ.ಅಂತಹ ಪ್ರತಿಭೆಗಳು ಹೊರಹೊಮ್ಮಲಿರುವಒಂದು ವಿಶಿಷ್ಟ ವೇದಿಕೆಯೇ’ ಪ್ರತಿಭಾಕಾರಂಜಿ’ ,ಈ ರೀತಿಯ ವೇದಿಕೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು, ಸಹಾಯಕವಾಗುವ ಒಂದುಅದ್ಭುತವಾದ ವ್ಯವಸ್ಥೆಯಾಗಿದೆ ಎಂದುಉದ್ಯಮಿ  ತುಂಬೆಯ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ  ಅಬ್ದುಲ್ ಸಲಾಂ ಹೇಳಿದರು.
ಬಂಟ್ವಾಳಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ತುಂಬೆ ವಿದ್ಯಾ ಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ ಬಂಟ್ವಾಳ ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವವನ್ನು ಉದ್ಘಾಟಿಸಿ  ಅವರು ಮಾತನಾಡಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕಿ ಸುಶೀಲಾ , ತುಂಬೆ ಸೆಂಟ್ರಲ್ ಸ್ಕೂಲ್‌ನ ರಕ್ಷಕ-ಶಿಕ್ಷಕ ಸಂಘದಅಧ್ಯಕ್ಷ ಬಶೀರ್ ತಂಡೇಲ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ತುಂಬೆಗ್ರಾಮ ಪಂಚಾಯತ್‌ ಅಧ್ಯಕ್ಷೆ  ಹೇಮಲತಾ ಜಿ. ಪೂಜಾರಿ ವಹಿಸಿದ್ದರು.
ಬಂಟ್ವಾಳ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ  ನಂದಾಎಸ್ತರ್,  ಉಷಾ,  ರೇಶ್ಮಾ, ಶಿಕ್ಷಣ ಸಂಯೋಜಕಿ  ಸುಶೀಲಾ, ತುಂಬೆ ಗ್ರಾಮ ಪಂಚಾಯತ್ ಸದಸ್ಯೆ  ಆತಿಕಾ ಬಾನು, ಸದಸ್ಯರಾದ ಝಹೂರ್, ತುಂಬೆ ಸೆಂಟ್ರಲ್ ಸ್ಕೂಲ್‌ನ ಪಿ.ಟಿ.ಎ.ಉಪಾಧ್ಯಕ್ಷ ನಿಸಾರ್‌ಅಹಮ್ಮದ್ ವಳವೂರು ಮತ್ತಿತರರು ಉಪಸ್ಥಿತರಿದ್ದರು.
ತುಂಬೆಕಾಲೇಜಿನ ಪ್ರಾಂಶುಪಾಲರಾದ  ಕೆ.ಎನ್‌ ಗಂಗಾಧರ ಆಳ್ವ ಪ್ರಸ್ತಾಪಿಸಿ, ಸ್ವಾಗತಿಸಿದರು.ತುಂಬೆ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಕೆ. ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕ  ಜಗದೀಶರೈ ಬಿ., ನಿರೂಪಿಸಿದರು.  ಬಂಟ್ವಾಳ ನಗರ ವಲಯದ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು೪೫೦ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here