ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 2019-20ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆಯು ಎರಡು ಹಂತಗಳಲ್ಲಿ ನಡೆಯಿತು. ಮೊದಲ ಹಂತದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಎರಡನೇ ಹಂತದಲ್ಲಿ ಹಿರಿಯ ಪ್ರಾಥಮಿಕ ವಿಭಾಗವಾಗಿ ಪೋಷಕರ ಸಭೆ ನಡೆಯಿತು.
ಪೋಷಕರು ಆಗಮಿಸಿದಾಗ ವಿದ್ಯಾರ್ಥಿನಿಯರು ರಕ್ಷೆ ಕಟ್ಟಿ ಆರ್ಶೀವಾದ ಪಡೆದುಕೊಂಡರು. ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಪೂರ್ವಗುರುಕುಲದ ಪರಿಕಲ್ಪನೆಯ ಬಗ್ಗೆ ರೂಪಕಲಾ ಹಾಗೂ ಶಾಲಾ ಬೆಳೆದು ಬಂದ ರೀತಿಯ ಬಗ್ಗೆ ಹಿರಿಯ ಪ್ರಾಥಮಿಕ ವಿಭಾಗದಿಂದ ರಾಜೇಶ್ವರಿಯವರು ಸಂಕ್ಷಿಪ್ತವಾಗಿ ವರದಿ ಸಲ್ಲಿದರು.


ನಂತರ ಪೋಷಕರ ಅಭಿಪ್ರಾಯ, ಅನಿಸಿಕೆಯನ್ನು ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ದೇಶದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಅತೀ ಹೆಚ್ಚು ಮಕ್ಕಳಿರುವ ಶಾಲೆ, ಇಂತಹ ಶಾಲೆಯಲ್ಲಿ ಕಲಿಯುವುದೇ ಸೌಭಾಗ್ಯ, ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೋಲಿಸಿದರೆ, ಕನ್ನಡ ಮಾಧ್ಯಮ ಮಕ್ಕಳಲ್ಲಿ ಉತ್ತಮ ವ್ಯವಹಾರಿಕ ಜ್ಞಾನ ಇರುತ್ತದೆ. ಹಾಗೂ ವಿಷಯ ವರ್ಣನೆ ಮಾತೃಭಾಷೆಯಲ್ಲಿ ಮಾಡುವ ಹಾಗೆ ಆಂಗ್ಲ ಮಾಧ್ಯಮದಲ್ಲಿ ಮಾಡಲು ಸಾಧ್ಯವಿಲ್ಲ. ಇಲ್ಲಿಯ ವಿದ್ಯಾರ್ಥಿಗಳಲ್ಲಿ ಧೈರ್ಯ ಅಪಾರವಾಗಿರುತ್ತದೆ. ಆದ್ದರಿಂದಲೇ ಮಕ್ಕಳಲ್ಲಿ ಹೆಚ್ಚಿನವರ ಆಯ್ಕೆ ಸೈನ್ಯಕ್ಕೆ ಸೇರುವುದಾಗಿರುತ್ತೆ, ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಶಿಕ್ಷಣದ ಜೊತೆ ಎಲ್ಲಾ ಕ್ರೀಡೆಗೆ ಸಂಬಂಧಿಸಿದ ತರಬೇತಿಗೂ ಅವಕಾಶವಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ತಮ್ಮನ್ನು ತಾವು ಗುರುತಿಸುವಂತಾಯಿತು, ಈ ಸಂಸ್ಥೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಸುವುದರಿಂದ ಅಳಿದು ಹೋಗುತ್ತಿರುವ ಕೃಷಿಯ ಬಗ್ಗೆ ಒಲವು ಮೂಡವಂತಾಗಿದೆ ಎಂದು ಪೋಷಕರು ತಮ್ಮ ತಮ್ಮ ಅನಿಸಿಕೆ ಮುಕ್ತವಾಗಿ ಹಂಚಿಕೊಂಡರು.
ನಂತರ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾರ್ಗದರ್ಶನದ ಮಾತುಗಳನ್ನಾಡಿದರು, ಮೊಬೈಲು ಬಳಕೆ ಮಾಡದಂತೆ ಹೆತ್ತವರು ಎಚ್ಚರ ವಹಿಸಬೇಕು, ಇದರಿಂದ ಮೆದುಳು ಹಾಗೂ ಹೃದಯದ ಮೇಲೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಹಾಗೆಯೇ ಟಿ.ವಿ ನೋಡುವುದನ್ನು ಹೆತ್ತವರು ಸೇರಿ ಕಡಿಮೆ ಮಾಡಬೇಕೆಂದು ತಿಳಿದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಮಾತೃಭಾರತಿ ಮಂಡಳಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಪ್ರಾಥಮಿಕ ಶಾಲಭಿವೃದ್ದಿ ಸಮಿತಿಯ ಅಧ್ಯಕ್ಷರು ಚಂದ್ರಶೇಖರ್ ಸಾಲ್ಯಾನ್, ಮಾತೃಸ್ವರೂಪಿಣಿಯಾದ ಡಾ|ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here