

ಪುತ್ತೂರು: ಭಾರತೀಯ ಸಂಸ್ಕೃತಿಯ ಪ್ರಕಾರ ಭಾರತದಲ್ಲಿ ವೃದ್ಧಾಶ್ರಮಕ್ಕೆ ಅವಕಾಶವಿಲ್ಲ, ಆದರೆ ಇಂದು ವೃದ್ಧಾಶ್ರಮಗಳು
, ಅನಾಥಾಶ್ರಮಗಳು
ಅನಿವಾರ್ಯ ಎಂಬ ಸ್ಥಿತಿ ಉಂಟಾಗಿದೆ ಎಂದು ಸಂಪ್ಯ ಆನಂದಾಶ್ರಮದ ಅಧ್ಯಕ್ಷೆ ಡಾ.ಗೌರಿ ಪೈ ಹೇಳಿದರು.
ಪುತ್ತೂರು ದರ್ಬೆ ವಿದ್ಯಾನಗರದ
ಬಹುವಚನಂ ಆಶ್ರಯದಲ್ಲಿ ಭಾನುವಾರ
ನಡೆದ ತಿಂಗಳ ಕಾರ್ಯಕ್ರಮದಲ್ಲಿ ವೃದ್ಧಾಶ್ರಮ-ಅನಾಥಾಶ್ರಮ ಮಾನವೀಯತೆಯ ಮುಖಗಳು ಕುರಿತಾದ ಸಂವಾದದಲ್ಲಿ ಅವರು ಮಾತನಾಡಿದರು.
ಜನರಿಗಾಗಿ ನಾವು ಕಷ್ಟಪಟ್ಟರೆ ನಮಗೆ ನೆರವು ಮಾಡುವವರೂ ಇರುತ್ತಾರೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದ ಅವರು, ತನ್ನ ಆನಂದಾಶ್ರಮದ ನಿರ್ವಹಣೆ, ಮಾನಸಿಕ ಆರೋಗ್ಯ,ಕ್ಯಾನ್ಸರ್ ಜಾಗೃತಿ, ಕಣ್ಣು ತಪಾಸಣಾ ಶಿಬಿರದಿಂದ ಆಗಿರುವ ಪರಿಣಾಮಗಳ ಬಗ್ಗೆ ವಿವರಿಸಿದರು. ಸಹಾಯ ಆಶ್ರಯಿಸಿ ಬಂದವರಿಗೆ ಆಶ್ರಯದ ಜೊತೆಗೆ ಬದುಕನ್ನು ಕಟ್ಟಿಕೊಡುವ ಕಾರ್ಯ ನಡೆಯುತ್ತಿದೆ, ಅವರ ಮುಖದ ಸಂತೋಷ ನಮ್ಮಲ್ಲಿ ಜೀವನೋಲ್ಲಾಸ ಹೆಚ್ಚಿಸುತ್ತದೆ ಎಂದರು.
ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಉದಯಕುಮಾರ್ ನೂಜಿ ಮಾತನಾಡಿ, ಮನೆಗಳಲ್ಲಿ ಹಿರಿಯರಿಗೆ ಸಿಗಬೇಕಾದ ಪ್ರೀತಿ, ಗೌರವ ಸಿಗದೇ ಇದ್ದಾಗ ಉಂಟಾಗುವ ಅನಾಥ ಪ್ರಜ್ಞೆಯೇ ಸಂಬಂಧ ಗಳ ನಡುವಿನ ಅಂತರವನ್ನು ಹೆಚ್ಚಾಗುವಂತೆ ಮಾಡುತ್ತದೆ, ಈ ಬಗ್ಗೆ ಕಿರಿಯ ಮನಸ್ಸುಗಳು ಜಾಗೃತರಾಗಬೇಕು ಎಂದರು. ಆಶ್ರಮದಲ್ಲಿ ವಿವಿಧ ಘಟನೆಗಳನ್ನು ಕೇಳುಗರ ಮುಂದೆ ತೆರೆದಿಟ್ಟರು.
ಸುರತ್ಕಲ್ ಚಿರಂತನ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಭಾರವಿ ದೇರಾಜೆ ಮಾತನಾಡಿ, ಪ್ರತೀ ಆಶ್ರಮ ಗಳಲ್ಲಿ ನಾಟಕ, ಸಿನಿಮಾ ಮಾಡುವಂತಾ ಕಥೆ, ಪಾತ್ರಗಳು ಸಿಗುತ್ತದೆ, ಆದರೆ , ಆಶ್ರಮದ ನಿರ್ವಹಣೆ ಯ ಹಿಂದಿನ ಕಷ್ಟ ಮಾತ್ರ ಹೇಳುವುದು ಕಷ್ಟ ಎನ್ನುತ್ತಲೇ, ವಿವಿಧ ಘಟನೆಗಳನ್ನು ಬಿಚ್ಚಿಟ್ಟರು. ಪುತ್ತೂರು
ಪ್ರಜ್ಞಾ ವಿಶಿಷ್ಟ ಚೇತನರ ಪುನರ್ವಸತಿ ಕೇಂದ್ರ ದ ಅಣ್ಣಪ್ಪ ರವರು ಮಾತನಾಡಿ, ಮಾನಸಿಕವಾಗಿ ಬೆಳವಣಿಗೆಯಾಗದೆ ಇರುವವರನ್ನು ನಮ್ಮ ಆಶ್ರಮದಲ್ಲಿ ನೋಡಿಕೊಳ್ಳಲಾಗುತ್ತಿದೆ. ಅವರಿಗೆ ಬೇಕಾಗಿರುವುದು ಪ್ರೀತಿ ಅದು ಮನೆಗಳಲ್ಲೂ ಸಿಗಬೇಕಿದೆ ಎಂದರು.
ಪ್ರಿಯಂವದ ಪ್ರಾರ್ಥಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಎಂ.ಕೆ.ಸ್ವಾಗತಿಸಿ, ವಂದಿಸಿದರು.







