ಶ್ರೀರಾಮ ಪ್ರೌಢ ಶಾಲೆಯಲ್ಲಿ ಪಾಲಕರ ಸಭೆ ನಡೆಯಿತು, ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ರವರು ಮಾತನಾಡಿ “ಶ್ರೀರಾಮ ವಿದ್ಯಾಸಂಸ್ಥೆ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಮಗುವಿಗೆ ಉತ್ತಮ ಮೌಲ್ಯಗಳನ್ನು ತುಂಬಿ ರಾಷ್ಟ್ರಕ್ಕೆ ಸತ್ಪ್ರಜೆಯನ್ನು ನೀಡುತ್ತಿದೆ,ಈ ಕಾರ್ಯಕ್ಕೆ ಪೋಷಕರ ಸಹಕಾರಅತ್ಯವಶ್ಯಕ, ಆದರೆಇಂದು ಮಕ್ಕಳ ಮನಸ್ಸನ್ನು ಮೊಬೈಲ್, ದೂರದರ್ಶನದಂತಹಆಧುನಿಕ ಸಲಕರಣೆಗಳು ವಿಕೃತಗೊಳಿಸಿ ಮಗುವಿನ ಜ್ಞಾನ, ಉತ್ತಮ ಗುಣಗಳನ್ನು ಕೆಡವುತ್ತಿದೆ, ಆದರಿಂದ ಪೋಷಕರುತನ್ನ ಮಕ್ಕಳಿಗೆ ಇಂತಹ ವಸ್ತುಗಳನ್ನು ನೀಡಬಾರದು, ಎಂದು ಪೋಷಕರಿಗೆ ಮನವರಿಕೆ ಮಾಡಿದರು.

“ಈ ಸಂಸ್ಥೆ ಹಿರಿಯರಿಗೆಗೌರವ ನೀಡುವ ಸಂಸ್ಕಾರವನ್ನು ನನ್ನ ಮಗು ಕಲಿತಿರುವುದು ಸಾರ್ಥಕ, ಹಿಂದು ಸಂಸ್ಕೃತಿಯಲ್ಲಿಶ್ರೀರಾಮನ ಆದರ್ಶವನ್ನು ಪಾಲಿಸುವ ಸಂಸ್ಥೆ ಶ್ರೀರಾಮ ವಿದ್ಯಾಸಂಸ್ಥೆ, ಇಲ್ಲಿ ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸ್ಸಾಹ ನೀಡುತಿದ್ದು, ನಮ್ಮ ಮಕ್ಕಳ ಸಾಧನೆಗೆ ಸ್ಪೂರ್ತಿಯಾಗಿದೆ, ಇಲ್ಲಿ ಕಲಿಸುವ ಯೋಗ, ಶ್ಲೋಕಗಳನ್ನು ನನ್ನ ಮಕ್ಕಳು ದಿನಂಪ್ರತಿಮನೆಯಲ್ಲಿಮಾಡುತಿದ್ದು, ಧ್ಯಾನದ ವೇಳೆಯಲ್ಲಿ ಮನೆಗೆ ಮಾತ್ರವಲ್ಲದೇಶಕ್ಕೆ ಒಳಿತಾಗಬೇಕು ಎಂದುದೇವರಲ್ಲಿ ಕೇಳಿಕೊಳ್ಳುತ್ತಿರುವುದು ಆಶ್ಚರ್ಯ ಹಾಗೂ ಸಂತೋಷವಾಯಿತು, ಈ ಶಾಲೆಗೆ ಬರುವ ಅತಿಥಿಗಳ ಮಾತುಗಳನ್ನು ಮನೆಗೆ ಬಂದು ಚರ್ಚಿಸಿ ಒಳ್ಳೆಯ ಅಂಶಗಳನ್ನು ಅಳವಡಿಸಿ ಕೊಳ್ಳುವ ಬಗ್ಗೆ ಮಕ್ಕಳು ಮನೆಯಲ್ಲಿ ಮಾತನಾಡುತ್ತಿರುವುದುಅದ್ಭುತ ಸಂಗತಿ, ಈ ಸಂಸ್ಥೆಯಲ್ಲಿಯಾವ ಮಕ್ಕಳನ್ನು ತಾರತಮ್ಯ ಮಾಡದೆ ನಿಜವಾದ ಪ್ರತಿಭೆಗೆ ಪ್ರೋತ್ಸಹ ನೀಡುತ್ತಿರುವುದು ನ್ಯಾಯಸಮ್ಮತವಾಗಿದೆ. ಆಂಗ್ಲ ಮಾಧ್ಯಮದವ್ಯಾಮೋಹಇಂದು ಸರಕಾರಿ ಶಾಲೆಗಳನ್ನು ಆಕ್ರಮಿಸಿದೆ, ಆದರೆ ಶ್ರೀರಾಮ ಸಂಸ್ಥೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ, ನನ್ನ ಮಗು ಈ ಸಂಸ್ಥೆಗೆ ಬರುತ್ತಿರುವುದುಎಂದು ಹೇಳಿಕೊಳ್ಳೋದಕ್ಕೆ ಹೆಮ್ಮೆಎಂದು ಅನಿಸುತ್ತದೆ: ನನ್ನ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸಲು ಕುಟುಂಬದಲ್ಲಿಒತ್ತಡವಿದ್ದರೂ ಈ ವಿದ್ಯಾಕೇಂದ ಕಳುಹಿಸಿ ಉತ್ತಮ ಕೆಲಸವನ್ನು ಮಾಡಿದ್ದೇನೆಎಂದು ನನ್ನ ಮಗುವಿನ ಸಾಧನೆ ನೋಡಿ ಹೆಮ್ಮೆ ಅನ್ನಿಸಿತು ಎಂದರು.ಮತ್ತೋರ್ವ ಪೋಷಕರು “ನನ್ನ ಮಗಳು ಈ ಸಂಸ್ಥೆಯಲ್ಲಿ೯೦% ಅಂಕ ಪಡೆದುಇಂಜಿನಿಯರ್‌ಕಾಲೇಜುನಲ್ಲಿ ಮೆರಿಟ್ ಸೀಟ್ ಸಿಕ್ಕಿರುವುದು ನನ್ನಂಥ ಬಡಕುಟುಂಬಕ್ಕೆ ಸಹಕಾರ ನೀಡಿದೆ.ಎಂದು ಪೋಷಕರು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‌ಎನ್, ಆಡಳಿತ ಸಮಿತಿಯ ಸದಸ್ಯರಾದ ಲಕ್ಶ್ಮೀ, ಹಾಗೂ ಸುಧಾ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ವಸಂತಿಕುಮಾರಿ,ಶಾಲಾಭಿವೃದ್ಧಿಸಮಿತಿಅಧ್ಯಕ್ಷರು, ಸದಸ್ಯರು ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಹಶಿಕ್ಷಕರಾದ ಪ್ರಶಾಂತ್ ನಿರೂಪಿಸಿ ಸೌಮ್ಯ ಸ್ವಾಗತಿಸಿ, ಜಿನ್ನಪ್ಪವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here