

ಯಾದವ ಕುಲಾಲ್ ಬಿ.ಸಿ.ರೋಡ್
ಒಂದು ಕಡೆ ಹಾಳಾದ ರಸ್ತೆ, ಮತ್ತೊಂದು ಕಡೆ ಸುರಿಯುತ್ತಿರುವ ಮಳೆಗೆ ಗುಡ್ಡದಿಂದ ಮಣ್ಣು ಕುಸಿಯುತ್ತಿದೆ. ಇದರ ಪಕ್ಕದಲ್ಲೇ ಇದೆ ಕೆಂಪುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ. ರಸ್ತೆಯ ಕೆಳಭಾಗದಲ್ಲಿ 20 ಮನೆಗಳಿವೆ. ಒಂದು ವೇಳೆ ರಸ್ತೆಯ ಸಂಪರ್ಕ ಕಡಿದುಕೊಂಡರೆ ಆ ಭಾಗದ ಜನರಿಗೆ ತೊಂದರೆ ತಪ್ಪಿದ್ದಲ್ಲ. ಇದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯ ಪರಿಸ್ಥಿತಿ.
ಮಳೆಗಾಲ ಪ್ರಾರಂಭಾದಲ್ಲಿಯೇ ಈ ಭಾಗದಲ್ಲಿ ಶಾಲಾ ಹಿಂಬಾಗದ ಭಾಗದಿಂದ ಮಣ್ಣು ಬೀಳಲಾರಂಭಿಸಿದ್ದು ಕಳೆದ ವಾರದ ರ್ಘ ಮಳೆಯಿಂದ ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಾಗೂ ಕೆಂಪುಗುಡ್ಡೆ ಶಾಲಾ ಬಳಿ ಮಣ್ಣು ಕುಸಿತವೂ ಜಾಸ್ತಿಯಾಗಿದೆ. ಕೆಂಪುಗುಡ್ಡೆ ಜಂಕ್ಷನ್ನಿಂದ ಕಜಿಪಿತ್ಲು, ತಡ್ಯಾಲ್ಗುಡ್ಡೆ, ನಲ್ಕೆಮಾರ್ನ್ನು ಸಂಪರ್ಕಿಸುವ ರಸ್ತೆಯು ಪ್ರಾಥಮಿಕ ಶಾಲೆಯ ಹಿಂಬದಿಯಿಂದ ಬೀಳುವ ಮಣ್ಣಿನಿಂದ ಹಾಳಾಗುವ ಸಾಧ್ಯತೆ ದಟ್ಟವಾಗಿದೆ. ರಸ್ತೆಯ ಕೆಳಭಾಗದಲ್ಲಿ 15 ಮನೆಗಳು ಇರುವುದರಿಂದ ಮನೆಗಳಿಗೂ ಹಾನಿಯಾಗುವ ಸಂಭವವಿದೆ.









ಅಂಗನವಾಡಿ ಮಕ್ಕಳ ಸ್ಥಳಾಂತರ : ಗುಡ್ಡದ ಮಣ್ಣಿನ ಕುಸಿತದಿಂದ ಪ್ರಾಥಮಿಕ ಶಾಲೆಯ ಮೇಲ್ಬಾಗದಲ್ಲಿರುವ ಅಂಗನವಾಡಿ ಕೇಂದ್ರವೂ ಕುಸಿಯುವ ಭೀತಿಯಲ್ಲಿದೆ. ಅಂಗನವಾಡಿ ಕೇಂದ್ರದ ಎರಡೂ ಬದಿಯಲ್ಲಿ ಎತ್ತರವಾದ ಗುಡ್ಡ ಪ್ರದೇಶ ಇರುವುದರಿಂದ ಮಣ್ಣು ಕುಸಿತ ಆಗುತ್ತಲೇ ಇದೆ. ಹಾಗಾಗಿ ಅಂಗನವಾಡಿ ಮಕ್ಕಳನ್ನು ಪಕ್ಕದಲ್ಲೇ ಇರುವ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಕಾರಿಗಳು ಆದಷ್ಟು ಶೀಘ್ರದಲ್ಲಿ ಸ್ಪಂದಿಸಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಶಾಲೆಯ ಸುರಕ್ಷತೆಯ ಬಗ್ಗೆ ಗಮನಹರಿಸುವ ಅಗತ್ಯವಿದೆ.
*****
ಪ್ರಾಥಮಿಕ ಶಾಲೆಯ ಬಳಿಯಿಂದ ಗುಡ್ಡದ ಮಣ್ಣು ಕುಸಿಯುತ್ತಿದ್ದು ರಸ್ತೆ ಮತ್ತಷ್ಟು ಕಿರಿದಾಗುವ ಸಾಧ್ಯತೆ ಇದೆ. ಜನರಿಗೆ ಸಂಚಾರಕ್ಕೆ ಅನುಕೂಲಕ್ಕಾಗಿ ಊರಿನ ತಡ್ಯಾಲ್ಗುತ್ತ ಮತ್ತು ಕಜಿಪಿತ್ಲು ಮನೆಯ ಹಿರಿಯರು ತಮ್ಮ ಸ್ವಂತ ಜಾಗವನ್ನೇ ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದರು. ಆದನ್ನು ಉಳಿಸುವ ಬಗ್ಗೆ ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕು.
– ಕವಿತಾ ಕಜಿಪಿತ್ಲು








