


ಬಂಟ್ವಾಳ: ಬಾಂಬಿಲ ರೇಂಜ್ ಮ್ಯಾನೇಜ್ಮೆಂಟ್ ಕಮಿಟಿ ವತಿಯಿಂದ ಬಾಂಬಿಲ ರೇಂಜ್ಗೊಳಪಟ್ಟ ಮದ್ರಸ ಅಧ್ಯಾಪಕರಿಗೆ ಬಕ್ರೀದ್ ಕಿಟ್ ವಿತರಣಾ ಕಾರ್ಯಕ್ರಮ ದೂಮಳಿಕೆಯ ಬಿಸ್ಮಿಲ್ಲಾ ಮದ್ರಸದಲ್ಲಿ ಇತ್ತೀಚೆಗೆ ಜರಗಿತು.
ಮುಫತ್ತಿಶ್ಗಳಾದ ಎಂ.ಎಚ್. ಖಾಸಿಂ ಮುಸ್ಲಿಯಾರ್ ಹಾಗೂ ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಬಾಂಬಿಲ ರೇಂಜ್ ಮ್ಯಾನೇಜ್ಮೆಂಟ್ ಕಮಿಟಿಯ ಅಧ್ಯಕ್ಷ ಬಿ.ಎಂ.ಬಾವ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸುಮಾರು 40 ಅಧ್ಯಾಪಕರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೇಂಜ್ ಅಧ್ಯಕ್ಷ ಜಿ.ವೈ.ರಝಾಕ್ ಮುಸ್ಲಿಯಾರ್, ಕಾರ್ಯದರ್ಶಿ ಪಿ.ಎಂ.ಯಹ್ಯಾ ಮುಸ್ಲಿಯಾರ್, ಎಚ್.ಇ ಹನೀಫ್ ದೂಮಳಿಕೆ, ಎಂ.ಎ.ಆದಂ ಮುಸ್ಲಿಯಾರ್, ಯೂಸುಫ್ ಹಾಜಿ, ಲತೀಫ್ ವಗ್ಗ, ಆರೀಫ್ ಎನ್.ಸಿ.ರೋಡ್, ಅಬೂಬಕರ್ ನೆಲ್ಲಿಗುಡ್ಡೆ, ಅಶ್ರಫ್ ಸುಲ್ತಾನ್ ನಗರ ಉಪಸ್ಥಿತರಿದ್ದರು.
ಮ್ಯಾನೇಜ್ಮೆಂಟ್ನ ಕಾರ್ಯದರ್ಶಿ ಕೆ.ಪಿ.ಉಮರ್ ಮುಸ್ಲಿಯಾರ್ ಪಾಂಡವರಕಲ್ಲು ಸ್ವಾಗತಿಸಿದರು.







