

ಬಂಟ್ವಾಳ: ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ 73 ನೇ ಸ್ವಾತಂತ್ರ್ಯೋತ್ಸವವನ್ನು ಗುರುವಾರ ಆಚರಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ಶಶಿಕಲಾ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇಶಕ್ಕೆ ಒಂದೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವಿದ್ದರೆ, ಮತ್ತೊಂದೆಡೆ, ಪ್ರಾಕೃತಿಕ ವಿಕೋಪ, ನೆರೆ ಪ್ರವಾಹದ ಜೊತೆಗೆ ಡೆಂಗ್ಯೂನಂತಹಾ ಮಾರಕ ಕಾಯಿಲೆಗಳು ನಿದ್ದೆಗೆಡಿಸುತ್ತಿದೆ. ಇವೆಲ್ಲದರ ಬಗ್ಗೆ ಭಾರತೀಯರು ಏಕಮನಸ್ಸಿನಿಂದ ಜಾಗೃತರಾಗಬೇಕಿದೆ ಎಂದರು.
ಕೇಂದ್ರದ ಶುಶ್ರೂಷಕಿ ಎಲ್ಸಮ್ಮ, ಲ್ಯಾಬ್ ಟೆಕ್ನೀಷಿಯನ್ ವಸುಧಾಕಾರಂತ್, ಮಮತಾ, ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀ ಪಿ.ಕೆ., ಕಿರಿಯ ಆರೋಗ್ಯ ಸಹಾಯಕಿ ಅರುಂಧತಿ, ಭಾರತಿ, ತಮಿಳ್ ಸೆಲ್ವಿ, ಚಿನ್ನಮ್ಮ, ಪವಿತ್ರ, ಕವಿತಾ, ಕೊಲ್ಲಮ್ಮ, ಲೀಲಾವತಿ, ಆಶಾ ಕಾರ್ಯಕರ್ತೆ ಶಶಿಕಲಾ,ನೌಕರರಾದ ಶಿಪ್ರಸಾದ್, ವೀಣಾ ಮತ್ತಿತರರು ಭಾಗವಹಿಸಿದ್ದರು.








