ಬಂಟ್ವಾಳ: ಭಾರತ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ  ಸಂವಿಧಾನದ ಚೌಕಟ್ಟಿನ ಲ್ಲಿ ಮೆರೆಯುತ್ತಿರುವ ಈ ಸಂದರ್ಭದಲ್ಲಿ ನಿಜಕ್ಕೂ ಭಾರತೀಯ ರಿಗೆ ಹೆಮ್ಮೆಯಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬಿಸಿರೋಡಿನ ಮಿನಿವಿಧಾನಸೌಧದ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮದ
 ಅಧ್ಯಕ್ಷ ತೆ ವಹಿಸ ಮಾತನಾಡಿದರು.
ಅನೇಕ ಹೋರಾಟಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ನೆನಪುಗಳ ಜೊತೆ ಅವರ ಆದರ್ಶದ ನಡೆಯಲ್ಲಿ ನಾವು ಮುಂದೆ ಸಾಗಬೇಕು. ಶಾಂತಿಯುತ ಜೀವನಕ್ಕೆ ಸಂಸ್ಕಾರದ ಜೀವನ ನಡೆಸಿ ಎಂದು ಹೇಳಿದರು.
ಬಂಟ್ವಾಳ ದ ಅಭಿವೃದ್ಧಿ ಗಾಗಿ ಎಲ್ಲರ ಸಹಕಾರ ಬೇಕು, ಪ್ರತಿಯೊಬ್ಬರೂ ಸ್ಚಚ್ಚತೆಗೆ ಹೆಚ್ಚಿನ ಗಮನಕೊಡಿ ಎಂದು ಅವರ ಈ ಸಂದರ್ಭದಲ್ಲಿ ತಿಳಿಸಿದರು.
ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಬೇರೆ ಬೇರೆ ಚಳುವಳಿಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರ ನೆನಪು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಬೇಧ ಭಾರತ ಮಕ್ಕಳು ಎಂಬ ಭಾವನೆಯಿಂದ ಒಗ್ಗಟ್ಟಿನ ಲ್ಲಿ ಬದುಕಿದಾಗ ಸದೃಢ ಭಾರತ ನಿರ್ಮಾಣ ವಾಗುತ್ತದೆ ಎಂದರು.
ಪ್ರಧಾನ ಬಾಷಣಕಾರರಾಗಿದ್ದ ಮಂಗಳೂರು ಕಾಲೇಹಿನ ಉಪನ್ಯಾಸಕಿ ನಾಗವೇಣಿ ಮಂಚಿ ಮಾತನಾಡಿ ಯಾರು ಅಧಿಕಾರವನ್ಬು ಸೂಶ್ರೂತವಾಗಿ ನಡೆಸಿಕೊಂಡು ಹೋಗುತ್ತಾರೆ ಅವರು ನಿಜವಾದ ಜನಸೇವಕ.
 ಅಧಿಕಾರಿಗಳು ಪ್ರಜೆಗಳ ಸೇವಕರು,
ಮೌಲ್ಯಯುತವಾದ ಉಚಿತ ಕಡ್ಡಾಯ ಶಿಕ್ಷಣ ಸಿಕ್ಕಾಗ ಅಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ, ಪ್ರಜ್ಞಾವಂತರ ನಾಡು ಅಗುತ್ತದೆ.
ನೈತಿಕವಾಗಿ ಜೀವನ ಮೌಲ್ಯ ಗಳನ್ನು ಕಲಿತುಕೊಂಡು ಆತ್ಮ ಶಕ್ತಿಯ ಮೂಲಕ ಬದುಕಲು ಕಲಿಯಬೇಕು ಅಲ್ಲಿ ಸ್ವಾತಂತ್ರ್ಯ, ಪ್ರೀತಿ ವಿಶ್ವಾಸ ಇರಲು ಸಾಧ್ಯ.
ದೇಶದ ಜೊತೆ ಬದುಕನ್ನು ಪ್ರೀತಿಸುವ ಪರಿಸರ ನಿರ್ಮಾಣ ಮಾಡೋಣ ಎಂದರು.
ತಾಲೂಕಿನ ಮಿನಿವಿಧಾನ ಸೌಧದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.
ಸ್ವಚ್ಚ ಭಾರತವಾಗಬೇಕಾದರೆ ನಾವು ಸ್ವಚ್ಚ ಬಂಟ್ವಾಳ ಆಭಿಯಾನ ನಡೆಸಬೇಕಾಗಿದೆ .
 ಬಂಟ್ವಾಳ ಬಂಗಾರದ ಪೇಟೆ ಎಂಬ ಹೆಸರಿಗೆ ತಕ್ಕಂತೆ ಇಲ್ಲಿನ ಜನರು ಚಿನ್ನದಂತಹವರು, ಅದಕ್ಕೆ ಸಾಕ್ಷಿ ನೆರೆಯ ಸಂದರ್ಭದಲ್ಲಿ  ಮರೆತು ಒಟ್ಟಾಗಿ ಕೆಲಸ ಮಾಡಿದ್ದು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ.ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಂಡ್ಯ, ಹಾಗೂ  ಜನಪ್ರತಿನಿಧಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಧ್ವಜಾರೋಹಣ ದ ಮೊದಲು ಪೋಲೀಸ್ , ಗೃಹರಕ್ಷಕ ದಳ, ಎನ್.ಸಿ.ಸಿ.ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್ ಕಬ್-ಬುಲ್ ಬುಲ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಸಭಾ ಕಾರ್ಯಕ್ರಮ ದ ಬಳಿಕ ಪುರಸಭಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ, ಪ್ರೌಡ ಶಾಲಾ ವಿದ್ಯಾರ್ಥಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ವತಿಯಿಂದ  ಕಾರ್ಯಕ್ರಮಗಳು ನಡೆಯಿತು.
ಬಂಟ್ವಾಳ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಸುರೇಶ್ ಬಿ. ಅವರ ಮುತುವರ್ಜಿಯಿಂದ
ಅರಣ್ಯ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಗಿಡವಿತರಣೆ, ಶಿಕ್ಷಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಇದೇ ಸಂದರ್ಭದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ ಸ್ವಾಗತಿಸಿ
ಶಿಕ್ಷಣಾಧಿಕಾರಿ ಜ್ಞಾನೇಶ್ ಮಂಡ್ಯ ವಂದಿಸಿದರು
ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here