• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. ಈ ಅದ್ಭುತ ವಿವೇಕವಾಣಿಯು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನಡೆದು ಬಂದ ರೀತಿಯನ್ನು ಅನುಸರಿಸುತ್ತದೆ. ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಆಗ ಮಾತ್ರ ನಮಗೆ ನಿಜವಾದ ದೇವರು ನಿಜವಾಗಿ ಒಲಿಯುತ್ತದೆ ಎನ್ನುವುದನ್ನು ಕಂಡದ್ದು ನಮ್ಮ ಸೇವಾ ಕಾರ್ಯದ ಸೇವಾ ಮಾಣಿಕ್ಯರಲ್ಲಿ. ನಮ್ಮ ಸಂಸ್ಥೆ ನಡೆದು ಬಂದ ರೀತಿಯು ಹಾಗೆ, ನಾವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನಾವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು, ಆದುದರಿಂದಲೇ ನಮ್ಮ ಸಂಸ್ಥೆ ಇಂದು ಈ ಸಮಾಜಕ್ಕೆ ಮಾದರಿ ಎನಿಸಿಕೊಂಡಿದ್ದು.

ಸೇವೆಯೇ ಜೀವನ; ಅಹಂಕಾರವೇ ಮರಣ. ನಿಸ್ವಾರ್ಥವೇ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಸೇವಾ ಮನೋಭಾವವೇ ಬದುಕಿನ ಧರ್ಮ ಎಂದು ಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಪರರ ತುಡಿತಗಳಿಗೆ ಹೆಗಲಾಗುತ್ತ ಹೋದ ಅದೆಷ್ಟೋ ಸೇವಾ ಮನೋಬಾಂಧವರು ನಮ್ಮ ಸಂಸ್ಥೆಯ ಜೊತೆ ಇದ್ದರೆ ಎನ್ನುವುದು ನಮಗೆಲ್ಲ ಹೆಮ್ಮೆ. ನಮ್ಮ ಸಂಸ್ಥೆ ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿದರೆ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದ ಆ 3 ಜನ ಯುವಕರ ದಂಡು ಇಂದು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ನೋಡಿದರೆ ಅಂದು ಹಿಯಾಳಿಸಿದವರಿಗೆ ಇಂದು ನಿಬ್ಬೆರಾಗುವುದು ಅಂತೂ ಅಕ್ಷರಶಃ ಸತ್ಯ. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಇಷ್ಟೆಲ್ಲ ಸೇವಾ ಕಾರ್ಯ ಮಾಡಲು ಸಾಧ್ಯ ಆಯಿತು ಎಂದರೆ ಜಗನ್ಮಾತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹವೇ ಮೂಲ ಕಾರಣ.

ಅಂದು ಆಗಸ್ಟ್ 14 2016ರಂದು ಆ ಯುವ ಮನಸ್ಸುಗಳಲ್ಲಿ ಮೂಡಿದ ಸೇವಾ ಮನೋಭಾವದಿಂದ ಇಂದು ಅದೆಷ್ಟು ಸಮಾಜಮುಖಿ ಸೇವಾ ಕಾರ್ಯ ಮಾಡುತ್ತ ತನ್ನ ಹಂತ ಹಂತ ಮೆಟ್ಟಿಲುಗಳನ್ನು ಮುನ್ನಡೆಸುತ್ತ, ಯಾವುದಕ್ಕೂ ಅಂಜದೆ, ಭೀತಿಯೇ ಪ್ರಪಂಚದ ದುಃಖಗಳಿಗೆ ಮೂಲ ಕಾರಣ ಎನ್ನುತ್ತಾ, ಯಾವುದೇ ನಿರ್ಭಿತಿ ಇಲ್ಲದೆ ಜನ ಸೇವೆಯೇ ಜನಾರ್ದನ ಸೇವೆ ಎನ್ನುವ ಮೂಲ ಉದ್ದೇಶವನ್ನಿಟ್ಟುಕೊಂಡು ಜಾಗೃತವಾಗಿದೆ ನಮ್ಮ ಸಂಸ್ಥೆ.

ನಾವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ಕಷ್ಟಪಟ್ಟು ದುಡಿಬೇಕು ಅವಾಗ ನಮ್ಮ ಮನದಲ್ಲಿ ಮೂಡಿದ ಉದ್ದೇಶ ದಡ ಸೇರುವುದು ನಿಶ್ಚಯ. ಇದರಿಂದಲೇ 35 ಮಾಸಿಕ ಸೇವಾ ಯೋಜನೆ ಮತ್ತು 26 ತುರ್ತು ಯೋಜನೆಯಲ್ಲಿ 97 ಸೇವಾ ಯೋಜನೆ ಮೂಲಕ ಈ ಸಮಾಜದ ಅಶಕ್ತರಿಗೆ ಸುಮಾರು ಇಪ್ಪತ್ತಾರು ಲಕ್ಷ ಅಧಿಕ ನೇರವನ್ನು ನೀಡಿದ ನಮ್ಮ ಸಂಸ್ಥೆ ಇಂದು ತನ್ನ ಮೂರನೇ ವರುಷವನ್ನು ಯಶಸ್ವಿಯಾಗಿ ಪೂರೈಸಿ ನಾಲ್ಕನೇ ವರುಷದ ಪಯಣಕ್ಕೆ ಸಜ್ಜಾಗಿದ್ದು, ಮುಂದೆ ಹಲವು ಉದ್ದೇಶವನ್ನು ನಮ್ಮ ಸಂಸ್ಥೆ ಇಟ್ಟುಕೊಂಡಿದ್ದು, ಈ ಸಮಾಜವನ್ನು ಸದೃಢಗೊಳಿಸಲು ಕನಸು ನಮ್ಮ ಮೇಲಿದೆ ಇದಕ್ಕೆಲ್ಲ ನೀವೆಲ್ಲ ನಮ್ಮ ಜೊತೆ ಭಾಗಿಯಾಗಿ ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ ಒಳ್ಳೆಯ ಉದ್ದೇಶಕ್ಕಾಗಿ ಜಾತಿ, ಧರ್ಮ , ರಾಜಕೀಯ ಬಿಟ್ಟು ನಾವೆಲ್ಲ ಒಂದಾಗೋಣ.

*ಕೊನೆಯದಾಗಿ*

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಮೂರು ವರುಷವನ್ನು ಇಂದು ಯಶಸ್ವಿಯಾಗಿ ಪೂರೈಸಿದ್ದು, ಈ ಮೂರು ವರುಷದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲ ಸೇವಾ ಮನೋಬಾಂಧವರಿಗೆ, ನಮ್ಮ ಸಂಸ್ಥೆಯ ಸೇವಾ ಕಾರ್ಯವನ್ನು ಈ ಸಮಾಜಕ್ಕೆ ಪರಿಚಯಿಸಲು ಪ್ರೋತ್ಸಾಹ ನೀಡಿದ ಎಲ್ಲ ಟಿ.ವಿ ಮಾಧ್ಯಮ, ಪತ್ರಿಕೆ ಮಾಧ್ಯಮದವರಿಗೂ, ಸೇವಾ ಕಾರ್ಯವನ್ನು ಗುರುತಿಸಿ ಗೌರವಿಸಿದ ಎಲ್ಲ ಸಂಘ-ಸಂಸ್ಥೆಗಳಿಗೂ, ಸಂಸ್ಥೆಯ ಸರ್ವ ಸೇವಾ ಮನೋಬಾಂಧವರಿಗೆ ಅನಂತಾನಂತ ಧನ್ಯವಾದ ಹೇಳುತ್ತಾ, ನಾಲ್ಕನೇ ವರುಷದ ಸೇವಾ ಪಯಣಕ್ಕೆ ಸಹಕಾರದ ಭರವಸೆಯಲ್ಲಿ.

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)

ಕಾರ್ಯ ವಿಭಾಗ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here