


ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇವರ ನೇತೃತ್ವದಲ್ಲಿ ತುಂಬೆ ರಾಮನಗರ ಶ್ರೀ ಶಾರದಾ ಸಭಾಭವನದಲ್ಲಿ ‘ಆಟಿದ ನೆಂಪು’ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ರೂಪಾ ಡಿ ಬಂಗೇರ ಮಡಿಕೆಯಲ್ಲಿ ಅಡಿಕೆ ಹಿಂಗಾರ ಅರಳಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಹಿರಿಯರ ಕಾಲದ ಕಷ್ಟದ ದಿನಗಳು ಜೊತೆಗೆ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಯುವಪೀಳಿಗೆಗೆ ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಯುವಂತಾಗುತ್ತದೆ ಮಾತ್ರವಲ್ಲ ನಮ್ಮ ಹಳ್ಳಿ ಬದುಕಿನ ಸೊಗಡು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಕುಲಾಲ ಮಾತೃಸಂಘದ ಉಪಾಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಮಾತನಾಡಿ ಆಟಿ ತಿಂಗಳ ಹಿಂದಿನ ಕಾಲದ ಸಸ್ಯಾಹಾರಿ ತಿನಸುಗಳು ಇಂದು ಆಯುರ್ವೇದ ಔಷಧಿ ಅಂಗಡಿಗಳಲ್ಲಿ ನಮಗೆ ದೊರಕುವಂತಾಗಿದೆ. ಈ ಆಹಾರಗಳು ದೈಹಿಕ ಅರೋಗ್ಯ ಕಾಪಾಡುವುದಲ್ಲದೆ ಆರ್ಥಿಕವಾಗಿಯೂ ಹೊರೆಯಾಗುವುದಿಲ್ಲ ಎಂದರು. . ವೇದಿಕೆಯಲ್ಲಿ ರೇಖಾ ಯಸ್ ಬಂಗೇರ, ಸಂಘದ ಅಧ್ಯಕ್ಷ ಐತ್ತಪ್ಪ ಕುಲಾಲ್,ಮಹಿಳಾ ಘಟಕದ ಅಧ್ಯಕ್ಷೆ ಉಮಾವತಿ ಲಿಂಗಪ್ಪ ಗೌರವಾಧ್ಯಕ್ಷರಾದ ನೀಲಪ್ಪ ಸಾಲಿಯಾನ್, ಲಿಂಗಪ್ಪ ಕುಲಾಲ್, ಸೇಸಪ್ಪ ಮಾಸ್ಟರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸದಸ್ಯರಿಗೆ ಆಟಿ ತಿಂಗಳ ಆಟೋಟ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಮಹಿಳಾ ಘಟಕದ ಸದಸ್ಯೆಯರಿಂದ ತುಳು ಜಾನಪದ ನ್ರತ್ಯ, ಪಾಡ್ಡನ ಮುಂತಾದ ಕಾರ್ಯಕ್ರಮಗಳು ಭಾರತಿ ಸೇಸಪ್ಪ ರವರ ನಿರ್ದೇಶನದಲ್ಲಿ ನಡೆಯಿತು.ಇದೇ ವೇಳೆ ಇತ್ತೀಚೆಗೆ ನಿಧನರಾದ ನಾಟಕಕಾರ,ಸಾಹಿತಿ ಸೀತಾರಾಮ ಕುಲಾಲ್ ಹಾಗೂ ಪಣೋಲಿಬೈಲಿನ ಹಿರಿಯ ಅರ್ಚಕರಾದ ಬಾಬು ಮೂಲ್ಯ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. . ಕಾರ್ಯದರ್ಶಿ ಪ್ರಿಯಾ ಸತೀಶ್ ಸ್ವಾಗತಿಸಿದರು. ಉಮಾವತಿ ಲಿಂಗಪ್ಪ ಪ್ರಸ್ತಾಪಿಸಿದರು. ಶೋಭಾ ಸದಾನಂದ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಲತಾಗೋಪಾಲ್ ವಂದಿಸಿದರು. ಭಾರತಿ ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸಂದೀಪ್ ಕುಲಾಲ್, ಭಾಸ್ಕರ್ ಕುಲಾಲ್, ಕೋಶಾಧಿಕಾರಿ ಸದಾನಂದ್, ಗೋಪಾಲ್ ಬೆದ್ರಾಡಿ, ವಿಜಯ ಕುಲಾಲ್, ಹರೀಶ್ ಪೆರ್ಲಬೈಲು, ದಿನೇಶ್ ಪೇರ್ಲಬೈಲ್ ಸಹಕರಿಸಿದರು. ಕೊನೆಯಲ್ಲಿ ಸದಸ್ಯರ ಮನೆಗಳಲ್ಲಿ ತಯಾರಿಸಿದ ಆಟಿ ತಿಂಗಳಲ್ಲಿ ಉಪಯೋಗಿಸುವ 25 ಕ್ಕಿಂತಲೂ ಹೆಚ್ಚು ಸಸ್ಯಾಹಾರಿ ತಿಂಡಿ ತಿನಿಸುಗಳ ಸವಿಯನ್ನು ಸವಿದರು





