


ಬಂಟ್ವಾಳ : ಸೇವೆ ಮತ್ತು ಭಾತೃತ್ವ ಲಯನ್ ಚಳುವಳಿಯಲ್ಲಿ ಒಟ್ಟೊಟ್ಟಿಗೆ ಬರುವಂತವುಗಳು. ಹಾಲಿ ವರ್ಷದ ಧ್ಯೇಯ ಸೇವೆಯನ್ನು ಪ್ರೀತಿಯಿಂದ ಮಾಡಿ ಎಂಬುದಾಗಿದೆ. ಎಂದು ಲಯನ್ ಜಿಲ್ಲೆ 217 ಡಿ. ಉಪಗವರ್ನರ್- 2 ಲ| ಎಂ.ಜೆ.ಎಫ್ ವಸಂತ ಕುಮಾರ್ ಶೆಟ್ಟಿ ಹೇಳಿದರು.
ಆದುದರಿಂದ ನೀವು ಕೂಡ ಸೇವೆಯನ್ನು ಪ್ರೀತಿ ಪೂರ್ವಕವಾಗಿ ಸಮರ್ಪಕವಾಗಿ ಮಾಡಿ ಹಾಗೂ ಭಾತೃತ್ವ ವನ್ನು ಪ್ರೀತಿಯಿಂದಲೇ ವ್ಯಕ್ತಪಡಿಸಿ ಹಾಗೂ ಜೀವನದಲ್ಲಿ ಆಳವಡಿಸಿ ಅವರು ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ 2019-20 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಲಿಗೋರಿ ಲೋಬೋ ನೂತನ ಅಧ್ಯಕ್ಷರಾಗಿ, ಐರಿನ್ ಡಿ’ಸೋಜ ಕಾರ್ಯದರ್ಶಿಯಾಗಿ, ಗ್ರೇಟ್ಟಾ ಫೆರ್ನಾಂಡಿಸ್ ಖಜಾಂಚಿಯಾಗಿ ಹಾಗೂ ವಿವಿಧ ಪದಾಧಿಕಾರಿಗಳು ಪ್ರತಿಗೈದು ಆಯಾ ಹುದ್ದೆಗಳನ್ನು ಸ್ವೀಕರಿಸಿದರು.
ಲೊರೆಟ್ಟೊ ಪ್ರಾಥಮಿಕ ಶಾಲಾ 25 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಅಗ್ರಾರ್ ಹೋಲಿ ಸೇವಿಯರ್ ಶಾಲಾ ವಿದ್ಯಾರ್ಥಿಗಳು ಹಾಗೂ ಇತರ ಮೂವರು ವಿದ್ಯಾರ್ಥಿಗಳಿಗೆ ಒಟ್ಟು ರೂ. ಒಂದು ಲಕ್ಷದಷ್ಟು ಶಾಲಾ ಶುಲ್ಕ ವಿತರಣೆ, ನಲ್ಕೆಮಾರು ಶಾಲೆಗೆ ಸುಣ್ಣ ಬಳಿಯಲು ಆರ್ಥಿಕ ಸಹಾಯ, ಆಲ್ಬರ್ಟ್ ಪಿರೇರಾ ಅವರ ಮನೆಗೆ ಸಿಡಿಲು ಬಡಿದು ಆದ ನಷ್ಟಕ್ಕೆ ಆರ್ಥಿಕ ಸಹಾಯ ಇತ್ಯಾದಿ ಸೇವಾ ಚಟುವಿಕೆಗಳನ್ನು ನಿರ್ವಹಿಸಿದರು.
ವಿವಿಧ ಲಯನ್ ಕ್ಲಬ್ ಹಾಗೂ ರೋಟರಿ ಕ್ಲಬ್ನ ಪ್ರತಿನಿಽಗಳು ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷೆ ಲಯನ್ ಮಾರ್ಲಿನ್ ಮಾರ್ಟಿಸ್ ಸ್ವಾಗತಿಸಿ, ಲ| ಐರಿನ್ ಡಿ’ಸೋಜ ವಂದಿಸಿದರು. ಲ|ಆಂಟೋನಿ ಮಾರ್ಟಿಸ್ ಕಾರ್ಯಕ್ರಮ ನಿರ್ವಹಿಸಿದರು.







