ಬಂಟ್ವಾಳ: ತಾಲೂಕಿನ  ಬಾಳ್ತಿಲ ಗ್ರಾಮದ ವಸಂತಿ ಆಚಾರ್ಯ ಎಂಬುವವರ ಮೇಲೆ ಅಡಿಕೆ ಮರಬಿದ್ದು ಬೆನ್ನುಹುರಿಗೆ ಗಾಯವಾಗಿ ಎದ್ದೇಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು  ಮಂಗಳವಾರ ಗಾಯಾಳುವಿನ ಮನೆಗೆ  ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ವೈದ್ಯಕೀಯ ಚಿಕಿತ್ಸೆಗೆ ವೈಯುಕ್ತಿಕ ಧನಸಹಾಯವನ್ನು ಮಾಡಿದರು,  ಮಹಿಳೆಯ ಚಿಕಿತ್ಸೆಗೆ 10 ಲಕ್ಷ ರೂವರೆಗೆ ಹಣದ ಅಗತ್ಯವಿದ್ದು , ತೀವ್ರ ಬಡತನದಲ್ಲಿರುವ ಕುಟುಂಬಕ್ಕೆ ನೆರವಿನ ಅಗತ್ಯವಿದೆ. ಈ ಪ್ರಕರಣವನ್ನು  ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದಲೂ ಗರಿಷ್ಠ ಪ್ರಮಾಣದ   ನೆರವನ್ನು  ಕೊಡಿಸಲು ಪ್ರಯತ್ನಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಭರವಸೆ  ನೀಡಿದರು.    ಈ  ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್ ,  ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ  ದಿನೇಶ್ ಅಮ್ಟೂರು, ಶಿವರಾಜ್, ಮಾಜಿ ತಾಪಂ ಸದಸ್ಯ ಮೋಹನ್ ಪಿ.ಎಸ್, ಬಾಳ್ತಿಲ ಗ್ರಾ. ಪಂ.ಅಧ್ಯಕ್ಷ ವಿಠಲನಾಯ್ಕ್, ಪೂರ್ಣಿಮಾ, ಶರತ್,  ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ಉದಯ ಶಾಂತಿಲ, ರತ್ನಾಕರ ಶೆಟ್ಟಿ , ವಿಶ್ವನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here