ಕಿಶೋರ್ ಪೆರಾಜೆ.
ಚಿತ್ರ ಸಹಕಾರ : ಶ್ರೀಪ್ರಸಾದ್ ಬಂಟ್ವಾಳ, ಶಕ್ತಿಪ್ರಸಾದ್ ಬಂಟ್ವಾಳ

ಆಶ್ಲೇಷಾ ಮಳೆಯ ತೀವ್ರತೆ ಗೆ ಬಾಂಜಾರು ಮಲೆ ಗರ್ಜಿಸಿದ ಪರಿಣಾಮ ದ.ಕ.ಜಿಲ್ಲೆಯ ಧಾರ್ಮಿಕ ಕೇಂದ್ರ, ಪ್ರವಾಸಿ ಕೇಂದ್ರ , ಬೆಳ್ತಂಗಡಿ ತಾಲೂಕು ಹಿಂದೆಂದೂ ಕಂಡರಿಯದ ಮಹಾಮಳೆಗೆ ಭೂಕುಸಿತಕ್ಕೊಳಗಾಗಿ ನೂರಾರು ಕುಟುಂಬ ಗಳು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಮನೆ, ಜಮೀನು ಕಳೆದುಕೊಂಡು ನಿರ್ಗತಿಕವಾಗಿದೆ, ಮುಂದೇನು ಎಂಬ ಚಿಂತನೆಯಲ್ಲಿ ಗಂಜಿಕೇಂದ್ರದಲ್ಲಿ ಕೈಕಟ್ಟಿ ದೇವರ ನೆನೆಯುತ್ತಾ ಕಣ್ಣೀರು ಸುರಿಸುತ್ತಾ ಸಹಾಯಹಸ್ತ ದ ನಿರೀಕ್ಷೆಯಲ್ಲಿದ್ದಾರೆ.

 

 

ನೆರೆಯಿಂದ ಹಾನಿಯಾದ ಬೆಳ್ತಂಗಡಿ ಯ ಕೆಲವು ಪ್ರದೇಶಗಳಿಗೆ ಸ್ನೇಹಿತ ಛಾಯಾಗ್ರಾಹಕರಾದ ಶ್ರೀಪ್ರಸಾದ್ ಮತ್ತು ಶಕ್ತಿಪ್ರಸಾದ್ ಅವರ ಜೊತೆ ಹೋಗಿ ನೋಡಿದಾಗ ಅವರ ಬಗ್ಗೆ ಮರುಕಹುಟ್ಟಿಸಿತು.
ದೂರದಿಂದ ನಿಂತು ನೋಡುವುದಕ್ಕಿಂತ ಸ್ವತಃ ತಾವೇ ಈ ಸ್ಥಳಗಳಿಗೆ ಭೇಟಿ ನೀಡಿದಾಗ ಗೊತ್ತಾಗುತ್ತದೆ ಅವರ ನೋವು.
ಅಂದು ವರಮಹಾಲಕ್ಮೀ ಪೂಜಾ ಆಚರಣೆ ಯ ಶುಭ ಶುಕ್ರವಾರ. ಮಧ್ಯಾಹ್ನ 2 ಗಂಟೆಯ ವೇಳೆ ಬಂಜಾರು ಮಲೆಯೆ ಗರ್ಜಿಸಿದ ಪರಿಣಾಮ
ಗುಡ್ಡೆ ಜರಿದು ನೀರಿನೊಂದಿಗೆ ಬೃಹತ್ ಗಾತ್ರದ ಮರಗಳು ಭಯಾನಕ ಶಬ್ದದೊಂದಿಗೆ ನದಿಯಲ್ಲಿ ತೇಲಿ ಬರುತ್ತದೆ,
ಬರುತ್ತಾ ನದಿಯ ಇಕ್ಕೆಲಗಳಲ್ಲಿ ನೂರಾರು ವರ್ಷಗಳಿಂದ ಕಷ್ಟಪಟ್ಟು ದುಡಿದು ಜೀವನ ಮಾಡುವ ಬಡಕುಟುಂಬಗಳ ಮನೆಗಳನ್ನು ಗುಡ್ಡ ಪ್ರದೇಶದಲ್ಲಿ ಇದ್ದ ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತದೆ.
ಜೊತೆಗೆ
ಹಲವಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಅದೇಷ್ಡೋ ದಾಖಲೆ ಪತ್ರಗಳು, ಬ್ಯಾಂಕ್ ಪಾಸು ಪುಸ್ತಕ, ಅದಾರ್ ಕಾರ್ಡ್, ಕಪಾಟಿನಲ್ಲಿ ಭದ್ರವಾಗಿ ಮಕ್ಕಳ ಮದುವೆಗೆ ಎಂದು ಕೂಡಿಟ್ಟ ಹಣ, ಒಡವೆ , ಸೀರೆ, ಬಟ್ಟೆ ಬರೆಗಳು ಎಲ್ಲವೂ ನೀರು ಪಾಲಾಗಿವೆ.
ಮನೆಯೊಳಗಿನ ಪಾತ್ರೆಗಳ ಸಹಿತ ಬೆಲೆಬಾಳುವ ಅನೇಕ ಮನಯ ಉಪಯೋಗಿ ವಸ್ತುಗಳು ಟಿ.ವಿ.ಪ್ರಿಡ್ಜ್ ಹೀಗೆ ಎಲ್ಲವೂ ಒಂದೊಂದಾಗಿ ನೀರಿನಲ್ಲಿ ಕಣ್ಣಮುಂದೆಯೇ ತೇಲಿ ಹೋಯಿತು.
ಮಧ್ಯಾಹ್ನ ದ ವೇಳೆ ಯಾದ್ದರಿಂದ ದೊಡ್ಡ ಮಟ್ಟದ ಪ್ರಾಣಿಹಾನಿಯಾಗಿಲ್ಲ.
ಜೀವನಾಧಾರ ಕ್ಕೆಂದು ಅನೇಕ ವರ್ಷಗಳಿಂದ ಬೆವರು ಸುರಿಸಿ ಕಷ್ಟಪಟ್ಟು ಮಾಡಿದ್ದ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಡಿಕೆ ಮರಗಳು ಕೆಲಕ್ಕರುಳಿದೆ, ಭತ್ತದ ಗದ್ದೆಗಳಲ್ಲಿ ಮರಳು ಮಣ್ಣು ರಾಶಿ ತುಂಬಿ ಕೊಂಡಿದೆ.
ಸರಕಾರದ ಜೊತೆಯಲ್ಲಿ ಸಂಘಸಂಸ್ಥೆಗಳು ಇವರಿಗೆ ಕೈಜೋಡಿಸಿ ಸಹಾಯ ನೀಡಿದೆ.
ಅದರೆ ಇವರು ಅನೇಕ ವರ್ಷಗಳಿಂದ ಸ್ವಂತ ಜಮೀನಿನಲ್ಲಿ ಕೃಷಿ ಮಾಡುತ್ತಾ ಜೀವನ‌ಸಾಗಿಸುತ್ತಿದ್ದವರು.
ಮನೆಕಟ್ಟಿ ಕೊಡುವ ಮೂಲಕ ಇವರಿಗೆ ಪುನರ್ವಸತಿ ನೀಡಬಹುದು, ಇವರ ಕೃಷಿ ಭೂಮಿಯನ್ನು ಮರಳಿ ಪಡೆಯಲು ಸಾಧ್ಯ ವಾಗಬಹುದೇ ಎಂಬ ಆತಂಕ ಇವರಲ್ಲಿ ಮನೆಮಾಡಿದೆ.
ಮುಂದಿನ ಜೀವನ ಹೇಗೆ ಸಾಗಬಹುದು ಎಂಬ ಚಿಂತೆ ಇವರನ್ನು ಕಾಡತೊಡಗಿದೆ.

ನೂರಾರು ಮಂದಿ ಗಂಜಿ ಕೇಂದ್ರದ ಲ್ಲಿ ನಿರಾಶ್ರಿತರಾಗಿ ಉಳಿದುಕೊಂಡರೆ ಅಗರಿಮಾರು ಎಂಬಲ್ಲಿ ನೂರಾರು ವರ್ಷಗಳ ಹಿಂದಿನ ಮನೆಯೊಂದರಲ್ಲಿ 14 ಕುಟುಂಬ ಗಳ 57 ಮಂದಿ ಮನೆಕಳೆದಕೊಂಡ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.

ಕುಕ್ಕಾವು ಸರಕಾರಿ ಶಾಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಗಂಜಿ ಕೇಂದ್ರದಲ್ಲಿ ದಿನಕಳೆಯುತ್ತಿದ್ದರೆ.
ವಿದ್ಯುತ್ ಕಂಬಗಳು ಉರುಳಿಬಿದ್ದ ಕಾರಣ ಮಲವಂತಿಗೆ ಇಡೀ ಗ್ರಾಮ ಕಳೆದ ನಾಲ್ಕು ದಿನಗಳಿಂದ ಕತ್ತಲಲ್ಲೇ ಉಳಿದುಕೊಂಡಿವೆ .
ಮೆಸ್ಕಾಂ ಇಲಾಖೆಯವರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ‌ಅದರೂ ಸಂಪೂರ್ಣ ಸಮಸ್ಯೆ ಪರಿಹಾರ ಮಾಡಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗಿದೆ.

ದಿಡುಪೆ , ಬಾಂಜಾರು ಮಲವಂತಿಗೆ ಗ್ರಾಮದ ಪರ್ಲ, ಮಕ್ಕಿ, ಕೆಳಗಿನ ಮಕ್ಕಿ, ದೈಪಿತ್ತಿಲು, ನೆತ್ತರ, ಇಳಿಯರಕಂಡ, ದೈಪಿತ್ತಿಲು ದರ್ಖಾಸು ಹಾಗೂ ಬೈಲು, ಕುಂಬಪಾಲು, ಕೊಂಡಪಾಲು, ಕೂರ, ನೆತ್ರಕೊಡಂಗೆ ಎಂಬಲ್ಲಿ ಗುಡ್ಡ ಕುಸಿದು ಹಾನಿಯಾಗಿದೆ.

ಮಲ ವಂತಿಗೆ ಗ್ರಾಮದ ಸುಮಾರು 18 ಮನೆಗಳವಿ ಅದರಲ್ಲಿ ಸುಮಾರು 14 ಕುಟುಂಬಗಳ 57 ಮಂದಿ ನಿರಾಶ್ರಿತರು ಅಗರಿ ಮಾರು ಜಲಜಾಲಕ್ಷಿ ಎಂಬವರ, ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಕುಟುಂಬದ ಲ್ಲಿ 105 ವರ್ಷ ಪ್ರಾಯದ ಸೀತಮ್ಮ ಅಜ್ಜಿ ಇದ್ದಾರೆ .ಅವರು ನಡೆದು ಕೊಂಡು ಸುಮಾರು 4 ಕೀ.ಮಿ ದಾರಿಯಲ್ಲಿ ಬಂದಿದ್ದಾರೆ. ಈ ಭಾಗಕ್ಕೆ ರಸ್ತೆಯಿದೆ ಅದರೆ ವಾಹನ ಹೋಗಯವಂತಿಲ್ಲ.
ಹಾಗಾಗಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆಯಲ್ಲಿ ಮಲಗಿದ್ದ ಶೀನಪ್ಪ ಗೌಡ್ಡ ಮಕ್ಕಿಮನೆ ಅವರನ್ನು ಬಡಿಗೆಯ ಮೂಲಕ ಹೊತ್ತುಕೊಂಡು ತಂದಿದ್ದೇವೆ.
ಮೊದಲ ದಿನ ನಾವು ಅವರಿಗೆ ಊಟ ನೀಡಿದ್ದೇವೆ ಎಂದು ಹೇಳಿದ ವೆಂಕಟರಮಣ ಗೌಡ ಅವರು, ಬಳಿಕ ಶಾಸಕರು ಹಾಗೂ ವಿವಿಧ ಸಂಘಸಂಸ್ಥೆಗಳ ಹಾಗೂ ಸರಕಾರದ ವತಿಯಿಂದ ನ ಮಗೆ ಬೇಕಾದಷ್ಟು ಸವಲತ್ತುಗಳನ್ನು ನೀಡುತ್ತಿದ್ದಾರೆ.

ರುಕ್ಮಯ ಗೌಡ, ಕೃಷ್ಣ ಪ್ಪ ಗೌಡ, ಆನಂದ ಗೌಡ, ಬೊಮ್ಮ ಗೌಡ, ಧರ್ಣಮ್ಮ ಹೆಂಗಸು, ಶೀನಪ್ಪ ಗೌಡ, ವೀರಪ್ಪ ಗೌಡ, ಶ್ರೀಧರ ಗೌಡ, ಶೀನಪ್ಪ ಗೌಡ, ಬಾಬು ಗೌಡ, ರಾಜು ಗೌಡ, ನಾರಾಯಣ ಗೌಡ, ಸುಂದರ ಗೌಡ, ಇಷ್ಟು ಮನೆಯ ಕುಟುಂಬ ಗಳು ಅಗರಿಮಾರು ಮನೆಯನ್ನು ಆಶ್ರಯಿಸಿದ್ದಾರೆ.

ಶ್ರೀಧರ ಗೌಡ ಮಕ್ಕಿ
ಮದ್ಯಾಹ್ನ 2 ಗಂಟೆಯ ವೇಳೆ ದೊಡ್ಡ ಸ್ಫೋಟ ದ ಸದ್ದು ಕೇಳಿತು, ಬಳಿಕ ಗುಡ್ಡ ಜರಿಯಲಾರಂಬಿಸಿತು ನಮಗೆ ಭಯ ಶುರುವಾಯಿತು. ಮನೆ ಬಿಟ್ಟು ಅಲ್ಲಿಂದ ನಾವು ಬಂದಿದ್ದೇವೆ. ವಾಪಾಸು ಅತ್ತಕಡೆ ಹೋಗಲು ಭಯವಾಗುತ್ತಿದೆ.
ಗುಡ್ಡಗಾಡು ಬಿಟ್ಟು
ನಮಗೆ ಜಾಗ ಇಲ್ಲೇ ನೀಡಿ ಎಂದು ಅವರು ಶಾಸಕರಲ್ಲಿ ಮನವಿ ಮಾಡಿದ್ದೇವೆ

ಜಲಜಾಕ್ಷೀ ಅಗರಿಮಾರು
ಮನೆಯ ಯಜಮಾನಿ.
ಇವತ್ತಿನವರೆಗೆ ಸರಕಾರ ಸಹಾಯಹಸ್ತ ನೀಡಿದೆ.
ಅದರೆ ಮುಂದೆ ಏನು ಎಂಬುದು ಪರಿಹಾರ ನೀಡುವ ವ್ಯವಸ್ಥೆ ಆಗಬೇಕಾಗಿದೆ.
ಅವರು ಯಾರಿಗೂ ಹೊರೆಯಾಗದೆ ಅವರ ಸ್ವಂತ ಜಮೀನಿನ ಲ್ಲಿ ಕೆಲಸ ಜೀವನ ಮಾಡುತ್ತಿದ್ದರು ಆದರೆ ಮುಂದಿನ ದಿನಗಳಲ್ಲಿ ಎಕರೆ ಗಟ್ಟಲೆ ಕೃಷಿ ಭೂಮಿಯನ್ನು ಕಳೆದುಕೊಂಡ ವರು ಹೇಗೆ ಜೀವನ ನಡೆಸುತ್ತಾರೆ ಎಂಬುದೇ ನಮ್ಮ ಚಿಂತೆ.

ಶಾಜಿ ಮ್ಯಾಥ್ಯೂ ಧರ್ಮಗುರುಗಳು ಗಂಡಿಬಾಗಿಲು ಸಂತ ಥೋಮಸ್ ಚರ್ಚ್.

ಮೊದಲನೇ ಹಂತದ ಪರಿಹಾರ ಸಿಕ್ಕಿದೆ ಎರಡನೇ ಹಂತದ ಪರಿಹಾರ ನೀಡುವ ಕೆಲಸ ಜಿಲ್ಲಾಧಿಕಾರಿ ಮೂಲಕ ಅಗಬೇಕಾಗಿದೆ.

 

ಮಾಪಲದಡಿ ಸಂಜೀವ ಗೌಡ.

ಮೈಗೆ ಹಾಕಲು ಬಟ್ಟೆ ಕೂಡಾ ಇಲ್ಲ, ಉಟ್ಟ ಬಟ್ಟೆಯಲ್ಲಿ ಮನೆಯಿಂದ ಓಡಿ ಹೋಗದಿದ್ದರೆ ನಾವು ನೀರಲ್ಲಿ ಕೊಚ್ಚಿಹೋಗುತ್ತಿದ್ದೇವೆ ಎಂದು ಹೇಳುತ್ತಾರೆ ಮನೆ ಕಳೆದುಕೊಂಡ ಮಾಪಲದಡಿ ಸಂಜೀವ ಗೌಡ.

ಮನೆಯೊಳಗಿನ ಎಲ್ಲಾ ವಸ್ತುಗಳ ಸಮೇತ ಮನೆ ಕೊಚ್ಚಿಕೊಂಡು ಹೋಗಿದೆ ಎಂದು ಕಣ್ಣುನೀರು ಹಾಕುತ್ತಾರೆ.

ನಾವು ಈವರಗೆ ಕೇಳಿಲ್ಲ ನೋಡಿಲ್ಲ ಆ ರೀತಿಯ ಲ್ಲಿ ಮಳೆಯೊಂದಿಗೆ ಮನೆಯನ್ನು ಕೊಚ್ಚಿಕೊಂಡು ಹೋಗಿದೆ.
ತಮ್ಮನ ಒಂದು ವರ್ಷದ ಮಗುವಿನ ಜೊತೆ
ಮನೆಯವರನ್ನು ಕರೆದುಕೊಂಡು ನೆರೆಮನೆಗೆ ಓಡಿ ಹೋಗಿದ್ದೇವೆ ಎಂದು ಅವರು ಹೇಳುತ್ತಾರೆ.

ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಿಲ್ಲ.
ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ.
ಶಾಲಾ ಮಕ್ಕಳ

ಪುಸ್ತಕ ಸಹಿತ ಬ್ಯಾಗ್ ಗಳು ನೀರು ಪಾಲಾಗಿವೆ.
ಮನೆಯಲ್ಲಿ ದ್ದ ಬಂಗಾರ ಹಲಾವರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ದಾಖಲೆಪತ್ರಗಳ ಸಹಿತ ಬಂಗಾರದಷ್ಟೆ ಬೆಲೆ ಬಾಳುವ ಅನೇಕ ವಸ್ತು ಗಳು ನೀರು ಪಾಲಾಗಿವೆ.

ಬೆಳ್ತಂಗಡಿ ಯಲ್ಲಿ ವರುಣನ ಅವತಾರ ಕ್ಕೆ ಸಿಲುಕಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿರುವ ಅದೆಷ್ಟೋ ಕುಟುಂಬಗಳಿಗೆ ಧೈರ್ಯ ತುಂಬಿ, ಸಹಾಯ ಮಾಡುವ ಅವರ ಜೀವನ ಬೆಳಗಿಸುವ ಸಹೃದಯಿ ಗಳ ಅವಶ್ಯಕತೆ ಇದೆ.

ಮುಗಿಸುವ ಮುನ್ನ

ಕಳೆದ ಬಾರಿ ಮಡಿಕೇರಿ ಜೋಡುಪಾಲ, ಈ ಬಾರಿ ಬೆಳ್ತಂಗಡಿ ಮುಂದಿನ ವರ್ಷ ?

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here