ಮುಂಬಯಿ, ಆ.೧೨: ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ಶನಿವಾರ ಸಂಜೆ ಮುಂಬಯಿ ಉಚ್ಚ ನ್ಯಾಯಲಯದ ವಕೀಲರೂ, ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷರೂ ಆದ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅವರ ನಿವಾಸಕ್ಕೆ ಸಾರ್ವಜನಿಕ ಭೇಟಿಯನ್ನಿತ್ತು ನೆರೆದ ಸದ್ಭಕ್ತರನ್ನು ಆಶೀರ್ವಚಿಸಿದರು.

ಘಾಟ್‌ಕೋಪರ್-ಮಾಂಕುರ್ಡ್ ಲಿಂಕ್‌ರೋಡ್‌ನ ಚೆಂಬೂರು ಅಲ್ಲಿನ ಮಹಾವೀರ ಪ್ಲಾಟಿನಂ ನಿವಾಸಕ್ಕೆ ಭೇಟಿಯನ್ನೀಡಿದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರನ್ನು ಪ್ರಕಾಶ್ ಎಲ್.ಶೆಟ್ಟಿ, ಶ್ರೀಮತಿ ಕಿಶೋರಿ ಪಿ.ಶೆಟ್ಟಿ (ದಂಪತಿ), ಸೂರಜ್ ಪಿ.ಶೆಟ್ಟಿ, ಹರ್ಷ ಎಸ್.ಶೆಟ್ಟಿ (ದಂಪತಿ), ಶೌರ್ಯ, ಸಾರ್ಥಕ್ ಪಿ.ಶೆಟ್ಟಿ, ಪಿ.ಧನಂಜಯ ಶೆಟ್ಟಿ, ಹರ್ಷವರ್ಧನ್ ಹೆಗ್ಡೆ, ಮಲ್ಲಿಕಾ ಹೆಗ್ಡೆ, ಕೌಶಿಕ್ ಹೆಗ್ಡೆ, ಶರದ್ ಶೆಟ್ಟಿ, ಅನುಪ್ರೀತ ಎಸ್.ಶೆಟ್ಟಿ, ಹರ್ಷಿತ ಶೆಟ್ಟಿ ಭವ್ಯ ಸ್ವಾಗತ ಕೋರಿದರು. ನಂತರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಅನೇಕ ಭಕ್ತಾಭಿಮಾನಿಗಳು ಆಗಮಿಸಿ ಶ್ರಿಗಳಿಂದ ಆಶೀರ್ವಚನ ಪಡೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here