ಬಂಟ್ವಾಳ: ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ, ಪರಿಹಾರ ನಿಧಿ ಸಂಗ್ರಹಿಸಿ ಸಂಭ್ರಮವಿಲ್ಲದೆ ಪರಸ್ಪರ ಶುಭಾಶಯ ವಿನಿಮಯ ಮಾಡುವ ಮೂಲಕ ವಿಟ್ಲ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಸರಳವಾಗಿ ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲಾಯಿತು.
ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ಯಾಕೂಬ್ ಪೈಝಿ ಕುತುಬಾ ನಿರ್ವಹಿಸಿ, ಮನುಷ್ಯನ ಅತೀ ಆಸೆಗೆ ಪ್ರಕೃತಿ ಬಲಿಯಾಗುತ್ತಿದ್ದು, ಇದರ ಅಸಮತೋಲನದಿಂದಲೇ ಪ್ರಾಕೃತಿ ನೆರೆಯಂತಹ ಅತಿವೃಷ್ಠಿ, ಅನಾವೃಷ್ಠಿಗಳು ಸಂಭವಿಸುತ್ತವೆ. ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿಯೂ ಪ್ರಾಕೃತಿಕ ವಿಕೋಪಗಳಂತಹ ಅನಾಹುತಗಳಾಗಿವೆ. ಇನ್ನುಂದೆ ಯಾವುದೇ ಪ್ರಾಕೃತಿಕ ಅವಘಡಗಳು ಆಗದಂತೆ ದೇವ ಭಯದೊಂದಿಗೆ ಅಲ್ಲಾಹನಲ್ಲಿ ಪ್ರಾರ್ಥಿಸೋಣ ಎಂದರು. ಬಳಿಕ ಈದ್ ಸಂದೇಶ ನೀಡಿ, ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕೈಜೋಡಿಸುವಂತೆ ಹಾಗೂ ಪರಸ್ಪರ ಸಹಾಯ ಮಾಡುವಂತೆ ಮನವಿ ಮಾಡಿದರು. ಬಳಿಕ ಪಿಎಫ್‌ಐ ತಲಪಾಡಿ ಘಟಕದ ವತಿಯಿಂದ ಪರಿಹಾರ ನಿಧಿಯನ್ನು ಸಂಗ್ರಹಿಸಲಾಯಿತು.
ಬಂಟ್ವಾಳ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಮತ್ತು ಶಾಂತಿ, ಏಕತೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉಸ್ತಾದ್ ಉಸ್ಮಾನ್ ದಾರಿಮಿ ಕುತುಬಾ ನೆರವೇರಿಸಿದರು.


ಅದೇ ರೀತಿ ಬಿ.ಸಿ.ರೋಡ್ ಮಸ್ಜಿದುಲ್ ಇಸ್ಲಾಮ್, ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ, ಬಂಟ್ವಾಳ ಬದ್ರಿಯಾ ಜುಮಾ ಮಸೀದಿ, ಸಜಿಪಮೂಡ-ಕಾರಾಜೆ ನೂರುಲ್ ಹುದಾ ಜುಮಾ ಮಸೀದಿ, ಸಜಿಪನಡು ಕೇಂದ್ರ ಜುಮಾ ಮಸೀದಿ, ಸಜಿಪಮುನ್ನೂರು-ಮಲೈಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ, ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿ, ಬೋಳಿಯಾರು ಮುಹಿಯುದ್ದೀನ್ ಜುಮಾ ಮಸೀದಿ, ಸಾಂಬಾರತೋಟ ನೂರಾನಿಯಾ ಜುಮಾ ಮಸೀದಿ, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಆಲಡ್ಕ ಬದ್ರಿಯಾ ಜುಮಾ ಮಸೀದಿ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್, ಗುಡ್ಡೆಯಂಗಡಿ ನೂರುದ್ದೀನ್ ಜುಮಾ ಮಸೀದಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ,ನಂದಾವರ ಕೇಂದ್ರ ಜುಮಾ ಮಸೀದಿ, ಪಲ್ಲಮಜಲು ಬದ್ರಿಯಾ ಜುಮಾ ಮಸೀದಿ, ನೆಹರೂನಗರ ಬದ್ರಿಯಾ ಜುಮಾ ಮಸೀದಿ, ಬೋಳಂಗಡಿ ಹವ್ವಾ ಜುಮಾ ಮಸೀದಿ, ಬೋಳಂತೂರು ಹಿದಾಯತ್ ನಗರ ಬದ್ರಿಯಾ ಜುಮಾ ಮಸೀದಿ, ಮೆಲ್ಕಾರ್-ರೆಂಗೇಲು ಬದ್ರಿಯಾ ಜುಮಾ ಮಸೀದಿ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಬಡಕಬೈಲ್ ಬದ್ರಿಯಾ ಜುಮಾ ಮಸೀದಿ, ಮುಲ್ಲರಪಟ್ನ ಮುಹಿಯುದ್ದೀನ್ ಜುಮಾ ಮಸೀದಿ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ, ಆರ್ಕುಳ ರಹ್ಮಾನೀಯ ಜುಮಾ ಮಸೀದಿಗಳಲ್ಲಿ ಈದ್ ಆಚರಿಸಲಾಯಿತು.
ವಿಟ: ಕೇಂದ್ರ ಜುಮಾ ಮಸೀದಿ, ವಿಟ್ಲ ದಾರುಲ್ ಅಶ್ ಅರಿಯ್ಯ ಟೌನ್ ಮಸೀದಿ, ನೀರಕ್ಕಣಿ ಸಿರಾಜುಲ್ ಹುದಾ-ಮದ್ರಸ, ವಿಟ್ಲ ಉಕ್ಕುಡ ಬದ್ರಿಯಾ ಜುಮಾ ಮಸೀದಿ, ಪರ್ತಿಪ್ಪಾಡಿ ಜುಮಾ ಮಸೀದಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿ, ಕೊಡಂಗಾಯಿ ಮುಹಿಯುದ್ದೀನ್ ಜುಮಾ ಮಸೀದಿ, ಉಕ್ಕುಡ ಜುಮಾ ಮಸೀದಿ, ಒಕ್ಕೆತ್ತೂರು ಬದ್ರಿಯ ಜುಮಾ ಮಸೀದಿ, ಟಿಪ್ಪುನಗರ ಕೊಡಂಗಾಯಿ ಇಮಾಂ ಶಾಫಿ ಜುಮಾ ಮಸೀದಿ, ಮಂಗಿಲಪದವು ಬಿಲಾಲ್ ಜುಮಾ ಮಸೀದಿ, ಕೊಡಂಗೆ ಖಿಳ್ರಿಯಾ ಜುಮಾ ಮಸೀದಿ, ನೀರ್ಕಜೆ ಮಸ್ಜಿದ್ ಸ್ವಹಾಬ, ಪರಿಯಾಲ್ತಡ್ಕ ಜುಮಾ ಮಸೀದಿ, ಪರಿಯಾಲ್ತಡ್ಕ – ಅಜ್ಜಿನಡ್ಕ ಮಸೀದಿ, ಕಾನತಡ್ಕ ಖಿಳ್ರಿಯಾ ಜುಮಾ ಮಸೀದಿ, ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ಕೆಲಿಂಜ, ಪೆರ್ನೆ ಬದ್ರಿಯಾ ಜುಮಾ ಮಸೀದಿ, ಗಡಿಯಾರ ಜುಮಾ ಮಸೀದಿ, ಬುಡೋಳಿ ಬಿಲಾಲ್ ಮಸ್ಜಿದ್ ಏನಾಜೆ, ಬುಡೋಳಿ ಗೌಸಿಯಾ ಜುಮಾ ಮಸೀದಿ, ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ, ಪೇರಮೊಗರು ಬದ್ರಿಯಾ ಜುಮಾ ಮಸೀದಿ, ನಚ್ಚೆಬೊಟ್ಟು ಬದ್ರಿಯಾ ಜುಮಾ ಮಸೀದಿ, ಶೇರಾ ಖಿಳ್ರ್ ಜುಮಾ ಮಸೀದಿ, ಮಾಣಿ ದಾರುಲ್ ಇರ್ಶಾದ್ ಜುಮಾ ಮಸೀದಿ, ಸುರಿಬೈಲು ಬದ್ರಿಯಾ ಜುಮಾ ಮಸೀದಿ, ಕೆದಿಲ ಮಸ್ಜಿದುರ್ರಹ್ಮಾನ್, ಪುನರೂರು ಮುಹಿಯುದ್ದೀನ್ ಜುಮಾ ಮಸೀದಿ, ಕಿನ್ನಿಗೋಳಿ-ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿ ಗುತ್ತಕಾಡು, ಪಾವೂರು ಬಚ್ಚಳಿಕೆ ಮಸ್ಜಿದ್ ಜಬಲನ್ನೂರು, ತುರ್ಕಳಿಕೆ ಬದ್ರಿಯಾ ಜುಮಾ ಮಸೀದಿಗಳಲ್ಲಿ ಈದ್ ಆಚರಣೆ ಮಾಡಲಾಯಿತು.
ಈದ್ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾನೆಯೇ ಹೊಸ ವಸ್ತ್ರಗಳನ್ನು ಧರಿಸಿ ಪುರುಷರು ಹಾಗೂ ಮಕ್ಕಳು ಮಸೀದಿಗೆ ಬಂದು ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ದಾನ ಧರ್ಮಗಳನ್ನು ನಡೆಸುವ ಮೂಲಕ ಕೃತಾರ್ಥರಾದರು. ಬಳಿಕ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಕಿಟ್, ದೇಣಿಗೆಯನ್ನು ಸಂಗ್ರಹಿಸುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here