ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜೀವ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ದಿನದ 24 ಗಂಟೆಗಳ ಕಾಲವೂ ತುರ್ತುಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.


ಇದರ ಜೊತೆಗೆ *ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್* ಕೂಡಾ ಸಂತ್ರಸ್ತರ ನೆರವಿಗೆ ನಿಂತಿದ್ದು, ಜಿಲ್ಲೆಯ ನಾನಾ ಕಡೆಗಳಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮುಂದಾಗಿದ್ದು,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಹಾಗೂ ಸಿದ್ದಕಟ್ಟೆ ಘಟಕದ ವತಿಯಿಂದ 11/08/2019 ನೇ ರವಿವಾರದಂದು ಬಿ.ಸಿ ರೋಡ್ ಹಾಗೂ ಸಿದ್ದಕಟ್ಟೆ ಪರಿಸರದಲ್ಲಿ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳು ಹಾಗೂ ನಿಧಿ ಸಂಗ್ರಹಿಸಲಾಯಿತು.
*ಎಬಿವಿಪಿ ಯ ಈ ಕಾರ್ಯಕ್ಕೆ ಬಿ.ಸಿ ರೋಡು ಹಾಗೂ ಸಿದ್ದಕಟ್ಟೆ ಜನತೆ ಅದ್ಭುತವಾಗಿ ಸ್ಪಂದಿಸುವ ಮೂಲಕ ಸಂತ್ರಸ್ತರ ನೆರವಿಗೆ ಕೈ ಜೋಡಿಸಿದ್ದಾರೆ.*
ಈ ಸಂದರ್ಭದಲ್ಲಿ ಧನ ಸಹಾಯ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ,ನಿರಾಶ್ರಿತರಿಗೆ ತಲುಪಿಸುವ ಜೊತೆಗೆ ಬಂಟ್ವಾಳ ಪರಿಸರದಲ್ಲಿ ನೆರೆ ಸಂತ್ರಸ್ತರಾದವರಿಗೆ ಮದ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕೂಡಾ ಬಂಟ್ವಾಳ ಶಾಖೆಯ ವತಿಯಿಂದ ನೀಡಲಾಯಿತು.. ಈ ಕಾರ್ಯದಲ್ಲಿ ಎಬಿವಿಪಿ ಯ ಪ್ರಮುಖ ಕಾರ್ಯಕರ್ತರು ಹಾಜರಿದ್ದರು..

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here